ರಾಜ್ ಕುಮಾರ್ ರವರನ್ನೇ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಸಲು ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆ ಸಚಿವ K.N Rajanna ಅವರಿಗೆ ಮನವಿ ಸಲ್ಲಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಆಡಳಿತ ಹಾಗೂ ಸಮುದಾಯ ಹಿತದೃಷ್ಟಿಯಿಂದ, ಶ್ರೀ ಡಾ.ಕೆ.ಆರ್.ರಾಜ್ ಕುಮಾರ್ ರವರನ್ನೇ ವ್ಯವಸ್ಥಾಪಕ ನಿರ್ದೇಶಕರಾಗಿ (ಪ್ರಭಾರ) ಮುಂದುವರಿಸಲು ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆ ಸಚಿವ Rajanna ಅವರಿಗೆ ಮನವಿ ಸಲ್ಲಿಸಿದೆ.
ಇದನ್ನು ಓದಿ : ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ
ನಿಗಮದಲ್ಲಿ ಭ್ರಷ್ಟಾಚಾರ, ಹಗರಣ ಮತ್ತು ಹಲವು ತನಿಖೆಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗದ ಸಮಾಜವು ಸಂಕಷ್ಟದಲ್ಲಿ ಸಿಲುಕಿತ್ತು. ಈ ಸಂದರ್ಭದಲ್ಲಿ, ಹಾಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಡಾ. ಕೆ.ಆರ್. ರಾಜ್ ಕುಮಾರ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದ್ದು, ಇಂದಿನವರೆಗೆ ಅವರು ನಿಗಮದಲ್ಲಿ ಪಾರದರ್ಶಕ ಆಡಳಿತ, ಸಿಬ್ಬಂದಿ ಸುಧಾರಣೆ ಹಾಗೂ ಜನಸ್ನೇಹಿ ನಿರ್ವಹಣೆಯ ಮೂಲಕ ನಿಗಮವನ್ನು ಮುನ್ನಡೆಸಲು ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆ ಮನವಿ
ಈ ಹಿನ್ನೆಲೆಯಲ್ಲಿಯೇ, ನಿಗಮದ ವ್ಯವಸ್ಥಾಪಕ ಹುದ್ದೆಗೆ ಅಶೋಕ್ ದುಡಗುಂಟಿ, ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ನಾಮ ನಿಗಮವನ್ನು ಹಿಂಪಡೆದು, ಶ್ರೀ ಡಾ. ಕೆ.ಆರ್. ರಾಜ್ ಕುಮಾರ್ ರವರ ನೇಮಕಾತಿಯನ್ನು ಮುಂದುವರೆಸುವಂತೆ ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆ ಮನವಿ ಮಾಡಿದೆ. ಕುಪ್ಪೂರು ಶ್ರೀಧರ್, ಎಸ್.ಆರ್. ನಾಯಕ್, ನಾಗರಾಜು, ರಮೇಶ್ ಮತ್ತಿತರರು ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಇದನ್ನು ನೋಡಿ : ಶಿರಾದಲ್ಲಿ DEADLY ACCIDENT ಓರ್ವ ವ್ಯಕ್ತಿ ಸಜೀವ ದಹ* | SIRA NEWS




