Bengaluru : ಮಹಿಳೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಕಿರಾತಕ.

ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ Bengaluru ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಇನ್ನು ಈ ಪ್ರಕರಣ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆಗಿದ್ದೇನು?
ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ಗೀತಾ ಎಂಬ ಮಹಿಳೆ ತನ್ನ ಮಗಳೊಂದಿಗೆ ವಾಸವಾಗಿದ್ದಾಳೆ. ಜೀವನೋಪಾಯಕ್ಕಾಗಿ ಪ್ರಾವಿಸನ್ ಸ್ಟೋರ್ ನಡೆಸುತ್ತಿದ್ದ ಗೀತಾಗೆ, ಅದೇ ಕಟ್ಟಡದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಮುತ್ತು ಎಂಬ ವ್ಯಕ್ತಿಯ ಪರಿಚಯವಿತ್ತು. ಮುತ್ತು, ಗೀತಾ ಅವರ 19 ವರ್ಷದ ಮಗಳೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದು, ಆಕೆಯನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಗೀತಾ ಮೇಲೆ ಒತ್ತಡ ಹಾಕುತ್ತಿದ್ದನು. ಆದರೆ ಗೀತಾ ಇದಕ್ಕೆ ಒಪ್ಪಿರಲಿಲ್ಲ.
ಇದನ್ನು ಓದಿ : ಚಳಿಗಾಲದಲ್ಲಿ ಮದ್ಯದ ಬೇಡಿಕೆ, ವಿಸ್ಕಿ–ರಮ್ ಗೆ ಭಾರೀ ಡಿಮ್ಯಾಂಡ್

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
ಇದೇ ಸಿಟ್ಟಿನಿಂದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಗೀತಾಳ ಮನೆಗೆ ನುಗ್ಗಿದ್ದಾನೆ. ನಂತರ ಪೆಟ್ರೋಲ್ ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಿಗೆಗೆ ಗೀತಾ, ಶೇಕಡಾ 50 ರಷ್ಟು ಸುಟ್ಟು ಹೋಗಿದ್ದಾರೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಗೀತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆ ಯತ್ನ ಪ್ರಕರಣ
ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯಾದ ಮುತ್ತುವಿನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನು ನೋಡಿ : ಬಳ್ಳಾರಿ: ಕಿರುಸೇತುವೆಗೆ ಕಾರು ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು




