Alcohol Demand: ಈ ಬಾರಿಯ ಚಳಿಗಾಲದ ಚಳಿಯು ಕಳೆದ ವರ್ಷಕ್ಕಿಂತಲೂ ತುಸು ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಮಾಂಸದ ಬೆಲೆಯೂ ಸಹ ಭರ್ಜರಿಯಾಗಿ ಹೆಚ್ಚಳವಾಗಿದೆ.

Alcohol Demand : ಸಾಮಾನ್ಯವಾಗಿ ಚಳಿಗಾಲದಲ್ಲಿ ವಿಸ್ಕಿ ಹಾಗೂ ರಮ್ಗೆ ಹೆಚ್ಚು ಬೇಡಿಕೆ ಇರುತ್ತದೆ. ಅದೇ ರೀತಿ ಬೇಸಿಗೆ ಕಾಲದಲ್ಲಿ ಬಿಯರ್ಗೆ ಹೆಚ್ಚಿನ ಡಿಮ್ಯಾಂಡ್ ಇರುತ್ತೆ.
ವಿಂಟರ್ ಸೀಸನ್ನಲ್ಲಿ ಯಾವ ಮದ್ಯ ಹೆಚ್ಚು ಜನಪ್ರಿಯ?
ಚಳಿಗಾಲದಲ್ಲಿ ವಿಸ್ಕಿ ಮತ್ತು ರಮ್ಗಳಿಗೆ ಹೆಚ್ಚು ಆದ್ಯತೆ ಸಿಗಲು ಪ್ರಮುಖ ಕಾರಣ, ಈ ಮದ್ಯಗಳು ನೀಡುವ ಸುವಾಸನೆ ಮತ್ತು ‘ಬೆಚ್ಚಗಿನ ಅನುಭವ’. ಹೆಚ್ಚಿನ ಆಲ್ಕೋಹಾಲ್ ಅಂಶ ಹೊಂದಿರುವ ವಿಸ್ಕಿ (ಸುಮಾರು 40% ABV ಅಥವಾ ಅದಕ್ಕಿಂತ ಹೆಚ್ಚು) ಮತ್ತು ರಮ್ಗಳು ಚಳಿಗಾಲಕ್ಕೆ ಹೊಂದಿಕೆಯಾಗುತ್ತವೆ.
ವಿಸ್ಕಿಯನ್ನು ಸಾಮಾನ್ಯವಾಗಿ ಬೆಚ್ಚಗಿನ ನೀರಿನ ಮಿಶ್ರಣದೊಂದಿಗೆ ನಿಧಾನವಾಗಿ ಸೇವಿಸುವ ರೂಢಿಯೂ ಇದೆ.
ಚಳಿಗಾಲದಲ್ಲಿ ವಿಸ್ಕಿಯೇ ಫೇವರಿಟ್ ಡ್ರಿಂಕ್
ಚಳಿಗಾಲದಲ್ಲಿ ವಿಸ್ಕಿಯನ್ನು ‘ವಿಂಟರ್ ಡ್ರಿಂಕ್’ ಎಂದೇ ಪರಿಗಣಿಸಲಾಗುತ್ತೆ. ಮಸಾಲೆ, ಒಣ ಹಣ್ಣುಗಳ ಸುವಾಸನೆ ಹೊಂದಿರುವ ವಿಸ್ಕಿ ಚಳಿಗಾಲದ ಆಹಾರಗಳೊಂದಿಗೆ ಹೆಚ್ಚು ಜನಪ್ರಿಯ. ಕೆಲವು ಮಂದಿ ಶೀತವಿರುವ ಸಂದರ್ಭದಲ್ಲಿಯೂ ವಿಸ್ಕಿ ಅಥವಾ ರಮ್ ಸೇವನೆ ಮಾಡುವ ಅಭ್ಯಾಸ ಹೊಂದಿದ್ದಾರೆ.
ಇದನ್ನೂ ಓದಿ : ಅಬಕಾರಿ ಇಲಾಖೆಗೆ ಭಾರೀ ಲಾಸ್ – ಹೊಸ ವರ್ಷಕ್ಕೂ ಮದ್ಯ ಪ್ರಿಯರಲ್ಲಿಲ್ಲ ಕ್ರೇಜ್..!!

ಕಾಲಾವಧಿಗೆ ತಕ್ಕಂತೆ ಬದಲಾಗುವ ಮದ್ಯ ಸೇವನೆ ರೂಢಿ
ಬಿಯರ್ಗೆ ಚಳಿಗಾಲದಲ್ಲಿ ಡಿಮ್ಯಾಂಡ್ ತುಸು ಕಡಿಮೆ. ಬಿಯರ್ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ (4–6% ABV) ಇರೋದ್ರಿಂದ, ಚಳಿಗಾಲಕ್ಕೆ ಅದು ಸೂಕ್ತವಲ್ಲ ಎಂದು ಹಲವರು ಭಾವಿಸ್ತಾರೆ. ಬಿಯರ್ನ್ನು ಹೆಚ್ಚಾಗಿ ದೇಹವನ್ನು ತಂಪಾಗಿ ಇಡುವ ಪಾನೀಯವಾಗಿ ಪರಿಗಣಿಸಿದ್ದು, ಬೇಸಿಗೆ ಕಾಲದಲ್ಲಿ ಇದರ ಮಾರಾಟ ಹೆಚ್ಚು.
ಒಟ್ಟಿನಲ್ಲಿ, ಕಾಲಾವಧಿ ಅನುಸಾರ ಮದ್ಯದ ಮಾರುಕಟ್ಟೆ ಬೇಡಿಕೆ ಬದಲಾಗುತ್ತಿದ್ದು, ಚಳಿಗಾಲದಲ್ಲಿ ವಿಸ್ಕಿ ಮತ್ತು ರಮ್ ಮುಂಚೂಣಿಯಲ್ಲಿದ್ದರೆ, ಬೇಸಿಗೆಯಲ್ಲಿ ಬಿಯರ್ ಪ್ರಾಬಲ್ಯ ಹೆಚ್ಚಾಗುತ್ತದೆ.
MUST WATCH: ಮನೆಗಳಲ್ಲಿ ಮದ್ಯ ಮಾರಾಟ ಮಾಡಿದ್ರೆ ಹುಷಾರ್ – ಖಡಕ್ ವಾರ್ನಿಂಗ್ ಕೊಟ್ಟ ಅಬಕಾರಿ ಅಧಿಕಾರಿ




