Haveri : ನಗರದ ಸಮೀಪದ ದೇವಗಿರಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ.

Haveri : ನಗರದ ದೇವಗಿರಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಶನಿವಾರ ರಾತ್ರಿ ಹೋಳಿಗೆ-ರೈಸ್ ಸಾಂಬಾರ ಊಟ ಸೇವಿಸಿದ 14ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ, ಹೊಟ್ಟೆ ನೋವು ಸೇರಿದಂತೆ ಅಸ್ವಸ್ಥತೆ ಅನುಭವಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸ್ಟೆಲ್ಗೆ ಅನ್ನಪೂರ್ಣೇಶ್ವರಿ ಖಾಸಗಿ ಮೆಸ್ ನಿಂದ ಆಹಾರ ಸರಬರಾಜು ಮಾಡಲಾಗುತ್ತಿತ್ತು. ಮೆಸ್ ಮಾಲೀಕರು ಕಳಪೆ ಆಹಾರ ಪದಾರ್ಥಗಳು ನೀಡಲಾಗಿದೆ ಎಂಬ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ : ಅಭಿಮಾನಿಗಳ ವರ್ತನೆಗೆ ನಟಿ ಸಮಂತಾ ಕಸಿವಿಸಿ
ವಿದ್ಯಾರ್ಥಿನಿಯರು ನಗರದ ಖಾಸಗಿ ಆಸ್ಪತ್ರೆ ದಾಖಲಾಗಿ ತಕ್ಷಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾರಂಭಿಕ ವರದಿ ಪ್ರಕಾರ, ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ.
- ಶನಿವಾರ ರಾತ್ರಿ ಹೋಳಿಗೆ-ರೈಸ್ ಸಾಂಬಾರ ಸೇವನೆ
- ಭಾನುವಾರ ಬೆಳಿಗ್ಗೆ ಹೊಟ್ಟೆ ನೋವು ಮತ್ತು ವಾಂತಿ
- ತಕ್ಷಣ ಚಿಕಿತ್ಸೆ, ಪ್ರಾಣಾಪಾಯ ತಪ್ಪಿಸಿದ್ದು
ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ತುರ್ತು ಪರಿಶೀಲನೆ
ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಧೈರ್ಯವಾಗಿ ಸಾಗಿಸುತ್ತಿದ್ದು, ಮೇಲಾಧಿಕಾರಿಗಳು ತುರ್ತು ಪರಿಶೀಲನೆ ಕಾರ್ಯ ನಡೆಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.ಪಾಲಕರು ಮುಂದೆಯೂ ಈ ರೀತಿಯ ಘಟನೆ ಪುನರಾವೃತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ.
ದನ್ನು ನೋಡಿ : ತೋಟಕ್ಕೆ ಹೋದ ಮಹಿಳೆಯನ್ನು ಚಿರತೆ ಕೊಂದ ಘಟನೆ SHOCKING | TURUVEKERE NEWS




