Samantha Ruth Prabhu

ಸೆಲೆಬ್ರೆಟಿಗಳನ್ನ ನೋಡೋದಕ್ಕೆ ಫ್ಯಾನ್ಸ್ ಮುಗಿಬೀಳೋದು ಸಹಜ. ಆದ್ರೆ ಅಭಿಮಾನಿಗಳ ಅತ್ಯುತ್ಸಾಹ ಬಹಳಷ್ಟು ಸಲ ನಟ-ನಟಿಯರಿಗೆ ಸಮಸ್ಯೆ ತಂದೊಡ್ಡಿರುವುದೂ ಉಂಟು. ಇತ್ತೀಚೆಗೆ ಹೈದರಾಬಾದ್ನಲ್ಲಿ ನಟಿ ನಿಧಿ ಅಗರ್ವಾಲ್ಗೆ ಈ ಕಹಿ ಅನುಭವ ಆಗಿತ್ತು. ಇದೀಗ ನಟಿ ಸಮಂತಾಗೂ ಅದರ ಬಿಸಿ ತಟ್ಟಿದೆ.
ಕಸಿವಿಸಿ ಅನುಭವ
ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ನಿಧಿ ಅಗರ್ವಾಲ್ ವಾಪಸ್ ತೆರಳುವ ವೇಳೆ ಅಭಿಮಾನಿಗಳ ಗುಂಪಿನ ಮಧ್ಯೆ ಸಿಲುಕಿಕೊಂಡು ಕಸಿವಿಸಿ ಅನುಭವಿಸಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ Social Media ಗಳಲ್ಲಿ ಭಾರೀ Viral ಆಗಿತ್ತು. ಇದೀಗ ಅದೇ ರೀತಿಯ ಘಟನೆ ಸಮಂತಾ ಅವರಿಗೂ ಸಂಭವಿಸಿದೆ.
ಇದನ್ನು ಓದಿ : BBK S 12|ಈ ವಾರ ಕಿಚ್ಚ ಸುದೀಪ್ ವೀಕೆಂಡ್ ನಿರೂಪಣೆ ಇಲ್ಲ – ಕಾರಣ ಏನು..??

ಸಮಂತಾ ಮೇಲೆ ಮುಗಿಬಿದ್ದ ಫ್ಯಾನ್ಸ್
ಹೈದರಾಬಾದ್ನಲ್ಲಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು Samantha ಅವರ ಮೇಲೆ ಮುಗಿಬೀಳಲು ಯತ್ನಿಸಿದ್ದಾರೆ. ಭಾನುವಾರ ಸಂಜೆ ನಡೆದ ಈ ಘಟನೆಯಲ್ಲಿ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಕೆಲವರು Shake Hand ಮಾಡಲು ಪ್ರಯತ್ನಿಸಿದ್ದಾರೆ.
ಜಾಲತಾಣಗಳಲ್ಲಿ ವೈರಲ್
ಈ ವೇಳೆ ಸಮಂತಾ ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ನಟಿಯನ್ನು ರಕ್ಷಿಸಿ ಕಾರಿನೊಳಗೆ ಸುರಕ್ಷಿತವಾಗಿ ಕೂರಿಸಿದ್ದಾರೆ. ಘಟನೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಘಟನೆ ಕುರಿತು ನಟಿ ಸಮಂತಾ ರುತ್ ಪ್ರಭು ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನು ನೋಡಿ : 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್




