ದೇಶಾದ್ಯಂತ ರೈಲು Ticket Price ಏರಿಕೆ ಮಾಡಿದ್ದು. ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಘೋಷಣೆ ಮಾಡಿದೆ.

ದೇಶದ ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಮತ್ತೊಮ್ಮೆ ಟಿಕೆಟ್ ದರ ಏರಿಕೆಯ ಶಾಕ್ ನೀಡಿದೆ. ಕೇವಲ ಆರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ರೈಲು ಟಿಕೆಟ್ ದರವನ್ನು ಹೆಚ್ಚಿಸುವ ತೀರ್ಮಾನವನ್ನು ರೈಲ್ವೇ ಇಲಾಖೆ ಕೈಗೊಂಡಿದ್ದು, ಡಿಸೆಂಬರ್ 26ರಿಂದ ಹೊಸ ದರ ಜಾರಿಗೆ ಬರಲಿದೆ.
ಮತ್ತೊಮ್ಮೆ ದರ ಪರಿಷ್ಕರಣೆ
ಈ ಬಾರಿ ಭಾರಿ ಪ್ರಮಾಣದ ಏರಿಕೆ ಇಲ್ಲದಿದ್ದರೂ, ಪೈಸೆಗಳ ಲೆಕ್ಕದಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದ್ದ ನಂತರ ಇದೀಗ ಮತ್ತೊಮ್ಮೆ ದರ ಪರಿಷ್ಕರಣೆ ಮಾಡಲಾಗಿದೆ.
ಪ್ರತಿ ಕಿಲೋಮೀಟರ್ಗೆ 1 ಪೈಸೆ ಹೆಚ್ಚಳ
215 ಕಿಲೋಮೀಟರ್ಗಿಂತ ಹೆಚ್ಚು ದೂರ ಪ್ರಯಾಣಿಸುವ ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಪ್ರತಿ ಕಿಲೋಮೀಟರ್ಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಎಕ್ಸ್ಪ್ರೆಸ್ Non Ac ಹಾಗೂ Ac ರೈಲುಗಳಲ್ಲಿ ಪ್ರತಿ ಕಿಲೋಮೀಟರ್ಗೆ 2 ಪೈಸೆ ಹೆಚ್ಚಳ ಜಾರಿಗೆ ಬಂದಿದೆ.
Non AC ಬೋಗಿಯಲ್ಲಿ 500 ಕಿಲೋಮೀಟರ್ವರೆಗೆ ಪ್ರಯಾಣಿಸುವವರು ಈಗಿರುವ ದರಕ್ಕಿಂತ ಸುಮಾರು 10 ರೂಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಆದರೆ ಉಪನಗರ ರೈಲು ಪ್ರಯಾಣ ಮತ್ತು ಮಾಸಿಕ ವಾಸುಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನು ಓದಿ : ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ – ಮನೆಗೆ ನುಗ್ಗಿ 7 ತಿಂಗಳ ಗರ್ಭಿಣಿಯನ್ನೇ ಕೊಂದ ತಂದೆ..!!

ದರ ಏರಿಕೆ ಅನಿವಾರ್ಯ
ಈ ಟಿಕೆಟ್ ದರ ಏರಿಕೆಯಿಂದ ರೈಲ್ವೇ ಇಲಾಖೆಗೆ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ. ರೈಲ್ವೇ ನೆಟ್ವರ್ಕ್ ವಿಸ್ತರಣೆ, ಕಾರ್ಯಾಚರಣೆ ವೆಚ್ಚಗಳ ಹೆಚ್ಚಳ, ಸುರಕ್ಷತೆ ಹಾಗೂ ದಕ್ಷತೆಯ ಸುಧಾರಣೆಗಾಗಿ ಈ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಇಲಾಖೆ ತಿಳಿಸಿದೆ.
ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ
ರೈಲ್ವೇ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇದರ ಪರಿಣಾಮವಾಗಿ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೇತನ ವೆಚ್ಚವು 1.15 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ನಿವೃತ್ತ ಸಿಬ್ಬಂದಿ ಹಾಗೂ ಅಧಿಕಾರಿಗಳ ಪಿಂಚಣಿಗಾಗಿ ಸುಮಾರು 60,000 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. 2024-25ನೇ ಸಾಲಿನಲ್ಲಿ ರೈಲ್ವೇ ನಿರ್ವಹಣಾ ವೆಚ್ಚ 2.63 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಏರಿಕೆಯಾಗುತ್ತಿರುವ ವೆಚ್ಚಗಳನ್ನು ಭರಿಸುವ ಜೊತೆಗೆ ಸುರಕ್ಷತೆ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳಲು ಅಲ್ಪ ಪ್ರಮಾಣದ Ticket Price ಏರಿಕೆ ಅಗತ್ಯವಿತ್ತು ಎಂದು ರೈಲ್ವೇ ಇಲಾಖೆ ಹೇಳಿದೆ.
ಕಾರ್ಗೋ ಸಾಗಣೆ ವ್ಯವಸ್ಥೆ
ವಿಶ್ವದ ರೈಲು ವ್ಯವಸ್ಥೆಗಳಲ್ಲಿ ಭಾರತವು ಎರಡನೇ ಅತಿ ದೊಡ್ಡ ಕಾರ್ಗೋ ಸಾಗಣೆ ವ್ಯವಸ್ಥೆಯಾಗಿದ್ದು, ಇತ್ತೀಚಿನ ಹಬ್ಬದ ಸೀಸನ್ನಲ್ಲಿ ರೈಲ್ವೇ ಇಲಾಖೆ ಯಶಸ್ವಿಯಾಗಿ 12,000 ವಿಶೇಷ ರೈಲುಗಳನ್ನು ನಡೆಸಿದೆ. ಇದು ರೈಲ್ವೇ ಇಲಾಖೆಯ ಕಾರ್ಯಾಚರಣೆ ದಕ್ಷತೆಗೆ ಉದಾಹರಣೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ನೋಡಿ : ಸಿದ್ದರಾಮಯ್ಯ ಮೇಲೆ RAJANNA ಮುನಿಸಿಕೊಂಡು D K SHIVKUMAR ಬಣ ಸೇರಿದ್ರಾ..?




