Bidar : ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ದುರಂತ ಅಂತ್ಯ.

ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಬೀದರ್ನ ಜನವಾಡಾ ಗ್ರಾಮದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇದನ್ನು ಓದಿ : ತುಮಕೂರಿಗರಿಗೆ ಗುಡ್ ನ್ಯೂಸ್ ಕೊಟ್ಟ DK ಶಿವಕುಮಾರ್
8 ವರ್ಷದ ಬಾಲಕಿ ದುರ್ಮರಣ!
ಗಡಿಕುಶನೂರು ಗ್ರಾಮದ 8 ವರ್ಷದ ರುತ್ವಿ ಎಂಬ ಬಾಲಕಿ ಶಾಲೆಯಿಂದ ವಾಪಸ್ ಶಾಲಾ ವಾಹನದಲ್ಲಿ ಮನೆಗೆ ಬಂದವಳು ಸ್ಕೂಲ್ ಬಸ್ ಇಳಿದು ಬಸ್ ಪಕ್ಕಕ್ಕೇ ನಿಂತಿದ್ದಳು. ಬಾಲಕಿ ಬಸ್ ಬಳಿ ಇರುವುದನ್ನ ಗಮನಿಸದೆ ಆಕೆಯೆ ಮೇಲೆಯೇ ಬಸ್ ಓಡಿಸಿದ್ದಾನೆ. ಈ ವೇಳೆ ಬಸ್ಗೆ ಸಿಲುಕಿ ರುತ್ವಿ ಸಾವನ್ನಪ್ಪಿದ್ದಾಳೆ.
ಪ್ರಕರಣ ದಾಖಲು
ಘಟನೆಯ ನಂತರ ಸ್ಥಳಕ್ಕೆ ಜನವಾಡಾ ಪೊಲೀಸ್ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಶಾಲಾ ಬಸ್ಗಳ ಸುರಕ್ಷತಾ ಕ್ರಮಗಳ ಕುರಿತಾಗಿ ಪಾಲಕರು ಹಾಗೂ ಸ್ಥಳೀಯರು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : ಡಿ.13ಕ್ಕೆ ಜಿಲ್ಲಾ ಬಂಜಾರ ಭವನ ಓಪನ್ – ಸಿದ್ಧೇಶ್ವರ ಸ್ವಾಮಿಗಳಿಂದ ಉದ್ಘಾಟನೆ | TUMAKURU NEWS |




