ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆ ನೀರು : ಡಿಸಿಎಂ ಡಿಕೆಶಿ ಭರವಸೆ.

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಪ್ರಮುಖವಾಗಿ ತೆಂಗು, ಅಡಿಕೆ, ರಾಗಿ ಬೆಳೆಯನ್ನು ಅತಿ ಹೆಚ್ಚು ಬೆಳೆಯುತ್ತಾರೆ. ಕೆಲವೊಂದು ಪ್ರದೇಶಗಳು ನೀರಾವರಿ ಪ್ರದೇಶಗಳಾದ್ರೆ, ಇನ್ನು ಕೆಲವು ಕಡೆ ಬರಡು ಭೂಮಿಯಾಗಿದೆ. ಕೆಲ ಪ್ರದೇಶಗಳು ಮಳೆ ಆಶ್ರಿತ ಪ್ರದೇಶಗಳಾಗಿದ್ದು, ರೈತರು ಬೆಳೆ ಬೆಳೆಯಲು ಸಂಕಷ್ಟ ಪಡುವಂತಾಗಿದೆ.
ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುವುದು ಬಹುದಿನಗಳ ಕನಸಾಗಿದ್ದು, ಕೆಲವೇ ತಿಂಗಳಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು DCM DK ಶಿವಕುಮಾರ್ ಭರವಸೆ ನೀಡಿದ್ದಾರೆ.
ಇದನ್ನು ಓದಿ : ಸರ್ಕಾರಿ ಕೆಲಸ ಸಿಗಲಿಲ್ಲ ಅಂತ ಮನನೊಂದು ಯುವಕ Suicide
ಜಲಸಂಪನ್ಮೂಲ ಸಚಿವ ಡಿಕೆಶಿ ಅವರಿಂದ ಭರವಸೆ
ನಿನ್ನೆ ವಿಧಾನಸಭೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಎತ್ತಿನಹೊಳೆ ಕಾರ್ಯಗತ ಆಗಿ ಸಾಂಕೇತಿಕವಾಗಿ ಉದ್ಘಾಟನೆ ಮಾಡಿ, ನೀರನ್ನು ಹರಿಸಲಾಗುತ್ತಿದೆ.
ಆದ್ರೆ ಬೇಲೂರು ಬಳಿ ನೀರು ಹರಿಯದೇ ಅರಣ್ಯ ಇಲಾಖೆಯವರು ಅಡ್ಡಿ ಪಡಿಸಿದ್ದಾರೆ ಈ ಬಗ್ಗೆ ವಿವರಣೆಯನ್ನು ಶಾಸಕ ಶಿವಲಿಂಗೇಗೌಡರು ಕೇಳಿದ್ರು.

ಶಿವಲಿಂಗೇಗೌಡ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಡಿಸಿಎಂ D.K ಶಿವಕುಮಾರ್, ಬೇಲೂರು ಬಳಿ 8 ಕಿಲೋ ಮೀಟರ್ ನೀರು ಹರಿಸಲು ಸಮಸ್ಯೆಯಾಗಿದೆ. ನೀರು ಹರಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ದೆಹಲಿ ಅರಣ್ಯ ಇಲಾಖೆಯು ಅಲ್ಲಿರುವ ಮಣ್ಣನ್ನು 24 ಕಿಲೋ ಮೀಟರ್ ದೂರಕ್ಕೆ ಸ್ಥಳಾಂತರಿಸುವಂತೆ ಹೇಳುತ್ತಿದ್ದಾರೆ.
ಇದ್ರಲ್ಲಿ ರಾಜಕಾರಣ ಕಾಣಿಸುತ್ತಿದೆ. ಆದ್ರು ಕೂಡ ಇನ್ನು ಐದಾರು ತಿಂಗಳಲ್ಲಿ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ರು.
ಎತ್ತಿನಹೊಳೆ ನೀರು ಹರಿಯುತ್ತಾ ಇಲ್ವಾ ಕಾದುನೋಡಬೇಕಿದೆ
ಒಟ್ನಲ್ಲಿ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲು ಇದ್ದ ಅಡ್ಡಿಯನ್ನು ಸರಿಪಡಿಸಿ ಮುಂದಿನ ಐದಾರು ತಿಂಗಳಲ್ಲಿ ಜಿಲ್ಲೆಗೆ ನೀರು ಹರಿಸುವ ಭರವಸೆ ನೀಡಿದ್ದು, ರೈತರಲ್ಲಿ ಕೊಂಚ ಸಮಾಧಾನ ತಂದಿದ್ದು, ಮುಂದಿನ ದಿನಗಳಲ್ಲಿ ಎತ್ತಿನಹೊಳೆ ನೀರು ಹರಿಯುತ್ತಾ ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ರಾಜ್ಯದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಸರ್ಕಾರದಲ್ಲಿ 24 ಸಾವಿರ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ-ಸಿಎಂ




