ಸರ್ಕಾರಿ ಕೆಲಸ ಸಿಗದ ಹಿನ್ನೆಲೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ಘಟನೆ ನಡೆದಿದೆ.

ಪದವಿ ಪೂರೈಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣ ನಹಳ್ಳಿಯಲ್ಲಿ ನಡೆದಿದೆ.
ಮನನೊಂದು ಆತ್ಮಹತ್ಯೆ
ಮೃತ ಯುವಕನನ್ನು ಅಂಜಿನಪ್ಪ (26) ಎಂದು ಗುರುತಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಬಳಿಕ ಅಂಜಿನಪ್ಪ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಿತ್ಯವೂ ಓದುತ್ತಿದ್ದ. ಆದರೆ ತನ್ನ ಶ್ರಮಕ್ಕೆ ಪ್ರತಿಫಲ ಸಿಗದಿರುವುದರಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎಂದು ಕುಟುಂಬವು ತಿಳಿಸಿದೆ. ಅಲ್ಲದೇ, ಕೊಠಡಿಯಲ್ಲಿ ಎಲ್ಲಿ ನೋಡಿದರೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇದ್ದವು. ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ ಎಂದು ಸ್ನೇಹಿತರ ಬಳಿ ಆಗಾಗ ಬೇಸರ ತೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇದನ್ನು ಓದಿ : ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂತಾರದ ಕನಕಾವತಿ
ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಳೆದ ರಾತ್ರಿ 7 ಗಂಟೆ ಸುಮಾರಿಗೆ, ಮನೆಯ ಮೇಲ್ಛಾವಣಿಯಲ್ಲಿ ತಾಯಿ ಬಟ್ಟೆ ಒಣಗಿಸಲು ಬಳಸಿದ್ದ ಸೀರೆಯಿಂದ ನೇಣು ಬಿಗಿದುಕೊಂಡು ಅಂಜಿನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಊಟಕ್ಕೆ ಬಂದಿಲ್ಲ ಎಂದು ಮನೆಯವರು ಬಾಗಿಲು ಬಡಿದರೂ ಮಗ ಬಾಗಿಲು ತೆಗೆದಿಲ್ಲ. ಮಲಗಿರಬಹುದೇನೋ ಎಂದು ಭಾವಿಸಿ ಪೋಷಕರು ಸುಮ್ಮನಾಗಿದ್ದರು. ಬೆಳಗ್ಗೆ ಮತ್ತೆ ಬಾಗಿಲು ತಟ್ಟಿದರೂ ಅಂಜಿನಪ್ಪ ಬಾಗಿಲು ತೆಗೆದಿಲ್ಲ. ನಂತರ ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ.
ಪ್ರಕರಣ ದಾಖಲು
ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಪ್ರಕರಣ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನು ನೋಡಿ : DARSHAN | ಅಭಿಮಾನಿಗಳಿಗೆ ಜೈಲಿನಿಂದಲೇ ದಚ್ಚು LETTER – ‘DEAR CELEBRATIES’ ಎಂದ D BOSS




