‘ಕಾಂತಾರ’ ನಟಿ ರುಕ್ಮಿಣಿ ವಸಂತ್ಗೆ ಹುಟ್ಟು ಹಬ್ಬದ ಸಂಭ್ರಮ : ಶುಭಕೋರಿದ ಹೊಂಬಾಳೆ.

ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರುಕ್ಮಿಣಿ ವಸಂತ್ ಕಾಂತಾರ-1 ಸಿನಿಮಾ ನಂತರ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಹೊಂಬಾಳೆ ಸಂಸ್ಥೆ ಜಾಲತಾಣದಲ್ಲಿ ಪೋಸ್ಟ್ ಹಾಕಿ ರುಕ್ಮಿಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಕಾಂತಾರ ನಂತರ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿ
2019ರಲ್ಲಿ ಬಿಡುಗಡೆಯಾದ ಬಿರ್ಬಲ್ ಚಿತ್ರದ ಮೂಲಕ ಚಿತ್ರ ರಂಗಪ್ರವೇಶ ಮಾಡಿದ Rukmini, ಈಗಾಗಲೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅವಕಾಶಗಳನ್ನು ದೊರಕಿಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ Kantara Chapter 1 ನಲ್ಲಿ ‘ಕನಕಾವತಿ’ ಪಾತ್ರದ ಮೂಲಕ Rukmini ಮತ್ತಷ್ಟು ಜನಪ್ರಿಯತೆ ಪಡೆದು, ಪ್ಯಾನ್–ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ನಿಂದ ವಿಶೇಷ ಶುಭಾಶಯ
ರುಕ್ಮಿಣಿಯವರ ಹುಟ್ಟುಹಬ್ಬದಂದು Hombale ಸಂಸ್ಥೆ ತಮ್ಮ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.
ಇದನ್ನು ಓದಿ : ಫ್ಯಾನ್ಸ್ಗೆ ಪತ್ರ ಬರೆದ ಡಿ ಬಾಸ್

ಟಾಕ್ಸಿಕ್ ಸಿನಿಮಾದಲ್ಲಿ ರುಕ್ಮಿಣಿ
ಅಂದಹಾಗೆ ರಾಕಿಂಗ್ಸ್ಟಾರ್ ಯಶ್ ಅವರ ಕನಸಿನ ಪ್ರಾಜೆಕ್ಟ್ ಟಾಕ್ಸಿಕ್ ಸಿನಿಮಾದಲ್ಲೂ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ನಟ ಶ್ರೀಮುರಳಿ ಅಭಿನಯದ `ಬಘೀರ’, ರಕ್ಷಿತ್ ಶೆಟ್ಟಿ ಜೊತೆಗೆ `ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಅದ್ಭುತವಾಗಿ ಪರ್ಫಾಮೆನ್ಸ್ ನೀಡಿದ್ದಾರೆ.

ಶಿವರಾಜ್ಕುಮಾರ್ ಅವರ ಜೊತೆಗೆ `ಭೈರತಿ ರಣಗಲ್’ ಸಿನಿಮಾದಲ್ಲಿ ಕೂಡಾ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಜೂ.ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ, ಇಷ್ಟೇ ಅಲ್ಲದೇ ಮಣಿರತ್ನಂ ಅವರ ಸಿನಿಮಾದಲ್ಲೂ ನಟಿ ರುಕ್ಮಿಣಿ ವಸಂತ್ ನಟಿಸಲಿದ್ದಾರಂತೆ.

ಇದನ್ನು ನೋಡಿ : ತಿಮ್ಲಾಪುರ ಗ್ರಾ.ಪಂ ನಲ್ಲಿ ಹಣ ದುರ್ಬಳಕೆ – ನರೇಗಾ ಹಣ ದುರುಪಯೋಗ ಆರೋಪ




