ನಾಳೆ Darshan ಅಭಿನಯದ ದಿ ಡೆವಿಲ್ ಸಿನಿಮಾ ರಿಲೀಸ್ – ಸಿನಿಮಾ ರಿಲೀಸ್ ಬೆನ್ನಲ್ಲೇ ಫ್ಯಾನ್ಸ್ಗೆ ಪತ್ರ ಬರೆದ ದಾಸ.

ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ವರುಷಗಳ ಬಳಿಕ ದಾಸನ ಸಿನಿಮಾ ರಿಲೀಸ್ ಆಗ್ತಾ ಇರೋದಕ್ಕೆ ಅಭಿಮಾನಿಗಳಲ್ಲಿ ಸಂಭ್ರಮ, ಸಡಗರ ಜೋರಾಗಿದೆ. ಆದರೆ ತಮ್ಮ ನೆಚ್ಚಿನ ನಟ ಜೈಲಿನಲ್ಲಿ ಇರೋದು ಫ್ಯಾನ್ಸ್ಗೆ ಬೇಸರ ತರಿಸಿದೆ. ಹೀಗಾಗಿ ಅಭಿಮಾನಿಗಳನ್ನು ಹುರಿದುಂಬಿಸಬೇಕು ಎಂಬ ಕಾರಣಕ್ಕಾಗಿ ಅಭಿಮಾನಿಗಳಿಗೆ ಡಿ ಬಾಸ್ ಪತ್ರ ಬರೆದಿದ್ದಾರೆ.
ಭಾವನಾತ್ಮಕ ಪತ್ರ
ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಿಂದ ಎರಡನೇ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲುಪಾಲಾಗಿದ್ದು, ದಚ್ಚು ಜೈಲಿನಲ್ಲಿ ಇರುವಾಗಲೇ ಬಹು ನಿರೀಕ್ಷಿತ ದಿ ಡೆವಿಲ್ (Devil) ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಆದ್ರೆ ಸಿನಿಮಾ ರಿಲೀಸ್ ಆಗ್ತಾ ಇದೆ ಅಂತಾ ಅಭಿಮಾನಿಗಳು ಒಂದ್ಕಡೆ ಖುಷಿಯಾಗಿ ಇದ್ರೆ, ಮತ್ತೊಂದ್ಕಡೆ ತಮ್ಮ ನೆಚ್ಚಿನ ನಟ ಜೈಲಿನಲ್ಲಿ ಇದ್ದಾರೆ ಅಂತಾ ಬೇಸರದಲ್ಲೂ ಇದ್ದಾರೆ. ಹೀಗಾಗಿ ಜೈಲಿನಿಂದಲೇ Darshan ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದು, ಆ ಪತ್ರವನ್ನು ಪತ್ನಿ ವಿಜಯಲಕ್ಷ್ಮೀ ಮೂಲಕ ಫ್ಯಾನ್ಸ್ಗೆ ತಮ್ಮ Instagram ಮೂಲಕ ತಲುಪಿಸಿದ್ದಾರೆ.

ಇದನ್ನು ಓದಿ : ಚಿನ್ನದ ಬೆಲೆ ಅಲ್ಪ ಹೆಚ್ಚಳ – ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ
ಪತ್ರದಲ್ಲಿ ಏನಿದೆ..?
ನನ್ನ ಹೃದಯದಿಂದ ಈ ಸಂದೇಶ ಕಳುಹಿಸುತ್ತಿದ್ದೇನೆ.. ವಿಜಿ ನಿಮ್ಮೆಲ್ಲರಿಗೂ ನನ್ನ ಸಂದೇಶವನ್ನು ತಲುಪಿಸುತ್ತಾಳೆ.. ನಿಮ್ಮೆಲ್ಲರ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ಬಗ್ಗೆ ಪ್ರತಿ ಬಾರಿಯೂ ವಿಜಿ ತಿಳಿಸುತ್ತಿದ್ದಾಳೆ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ.
ನಾನು ಹೇಳೋದು ಏನೆಂದರೆ ಯಾರು ಏನೇ ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ, ನೆಗೆಟಿವಿಟಿಗೆ ಕಿವಿಕೊಡಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿ ನಾನು ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ದೊಡ್ಡ ಶಕ್ತಿ ನೀವೇ. ಈ ಸಮಯದಲ್ಲಿ ನಾನು ಬಯಸುವುದು ಒಂದೇ. ನಮ್ಮ ಡೆವಿಲ್ ಸಿನಿಮಾ ಕಡೆಗೆ ಗಮನ ಹರಿಸಬೇಕು. ನನಗೆ ತೋರಿಸಿದ ಪ್ರೀತಿಯನ್ನು ಡೆವಿಲ್ಗೂ ತೋರಿಸಿ. ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ, ಧ್ವನಿಗೆ
ಉತ್ತರಿಸಬೇಕು. ನನ್ನ ಸಿನಿಮಾಗೆ ನೀವು ಮಾಡ್ತಿರೋ ಪ್ರಚಾರ, ಶ್ರಮ ಮತ್ತು ನಿಮ್ಮ ಒಗ್ಗಟ್ಟಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕನಗುತ್ತೇನೆ. ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯುತ್ತಿರೋದೇ ಖುಷಿ ಕೊಡ್ತಿದೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತಿರೋ ನಾನು ನನ್ನ ಸೆಲೆಬ್ರಿಟಿಗಳನ್ನ ಅಷ್ಟೇ ನಂಬುತ್ತಿನಿ. ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಎಲ್ಲವನ್ನೂ ಉತ್ತರಿಸುತ್ತದೆ. ಅಲ್ಲಿವರೆಗೂ ತಲೆಯನ್ನೆತ್ತಿ, ಹೃದಯ ಬಲವಾಗಿರಲಿ, ಪ್ರೀತಿ ಅಚಲವಾಗಿರಲಿ. ಅಂತಾ ಪತ್ರದಲ್ಲಿ Darshan ತಿಳಿಸಿದ್ದಾರೆ.

ಸಹ ಕೈದಿಗಳ ಜೊತೆ ದರ್ಪ
ಇನ್ನು ಇದೇ ವೇಳೆ ದರ್ಶನ್ ಜೈಲಿನಲ್ಲಿ ಸಹ ಕೈದಿಗಳ ಜೊತೆ ದರ್ಪ ತೋರಿ ಗಲಾಟೆ ಮಾಡಿದ್ದಾರೆ ಅನ್ನೋ ಆರೋಪಗಳು ಸುಳ್ಳು. ನಾನೇ ಜೈಲಿಗೆ ತೆರಳು ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅಂತಾ ವಿಜಯಲಕ್ಷ್ಮೀ Instagram Post ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ನೋಡಿ : ಕೊ*ಲೆ ಮಾಡಿ SELFI VIDEO ಮಾಡಿದ ಕಿರಾತಕರು- ಗಾಂಜಾ ನಶೆಯಲ್ಲಿ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ





