ಆಸ್ಕರ್ ರೇಸ್ಗೆ ಎಂಟ್ರಿ ಕೊಟ್ಟ ‘ಕಾಂತಾರ ಚಾಪ್ಟರ್ 1’; ಹಾಲಿವುಡ್ ಸಿನಿಮಾಗಳ ಜೊತೆ Rishab Shetty ಸಿನಿಮಾ ಸ್ಪರ್ಧೆ

ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಇದೀಗ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದುಕೊಂಡಿದೆ.
ಇದು ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ ಅಲ್ಲವಾದರೂ, ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಮೂಲಕ ಆಸ್ಕರ್ ಸ್ಪರ್ಧೆಗೆ ಪ್ರವೇಶ ಪಡೆದಿರುವುದು ವಿಶೇಷ.
ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ
‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ Rishab Shetty ನಿರ್ದೇಶನದ ಈ ಚಿತ್ರ ಸ್ಪರ್ಧೆ ನಡೆಸುತ್ತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಹಾಲಿವುಡ್ನ ದೊಡ್ಡ ದೊಡ್ಡ ಸಿನಿಮಾಗಳ ಜೊತೆ ‘ಕಾಂತಾರ ಚಾಪ್ಟರ್ 1’ ಪೈಪೋಟಿ ನಡೆಸಬೇಕಿದೆ.

ಇದನ್ನು ನೋಡಿ : ವಿಜಯ್ಗೆ ಬಿಗ್ ರಿಲೀಫ್; ‘ಜನನಾಯಗನ್’ಗೆ ಸಿಕ್ತು ಗ್ರೀನ್ ಸಿಗ್ನಲ್!
ಒಟ್ಟು ಎಷ್ಟು ಕಲೆಕ್ಷನ್..?
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದರು. ಅದಾದ ಬಳಿಕ ಅವರು ‘ಕಾಂತಾರ: ಚಾಪ್ಟರ್ 1’ ಅನ್ನು ನಿರ್ದೇಶಿಸಿ, ನಟಿಸಿದ್ದಾರೆ.
ಈ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದು, ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರವು OTT ಯಲ್ಲೂ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ.
‘ಮಹಾವತಾರ ನರಸಿಂಹ’ ಆಸ್ಕರ್ ರೇಸ್ಗೆ ಆಯ್ಕೆ
ಈ ನಡುವೆ ‘ಕಾಂತಾರ ಚಾಪ್ಟರ್ 1’ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದಿರುವುದು ಚಿತ್ರತಂಡಕ್ಕೆ ಮತ್ತೊಂದು ದೊಡ್ಡ ಗೌರವವಾಗಿದೆ. ಈ ಚಿತ್ರವನ್ನು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.
ಇದೇ ಸಂಸ್ಥೆ ಪ್ರಸ್ತುತಪಡಿಸಿದ ‘ಮಹಾವತಾರ ನರಸಿಂಹ’ ಸಿನಿಮಾ ಕೂಡ ಸಾಮಾನ್ಯ ಪ್ರವೇಶ ಪಟ್ಟಿಯ ಮೂಲಕ ಆಸ್ಕರ್ ರೇಸ್ಗೆ ಆಯ್ಕೆಯಾಗಿದೆ.

ಆಸ್ಕರ್ ಗೆದ್ದು ಇತಿಹಾಸ
ಹಲವು ಹಂತಗಳಲ್ಲಿ ನಡೆಯುವ ಈ ಆಸ್ಕರ್ ಸ್ಪರ್ಧೆಯಲ್ಲಿ ಈ ಎರಡು ಸಿನಿಮಾಗಳ ಪೈಕಿ ಯಾವುದಾದರೂ ಚಿತ್ರ ಗೆಲುವು ಸಾಧಿಸಬಹುದೇ ಎಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಇದುವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಪೂರ್ಣ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ. ಆದರೆ ಇದಕ್ಕೂ ಮುನ್ನ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು’ ಹಾಡು ಪ್ರತ್ಯೇಕ ಅರ್ಜಿ ಸಲ್ಲಿಸಿ ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ಅನೇಕ ಕಲಾವಿದರು ಅಭಿನಯ
Kantara Chapter 1 ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ಕನ್ನಡ ಸಿನಿಮಾಗೆ ಮತ್ತೊಮ್ಮೆ ಗೌರವ ಸಿಗುವ ನಿರೀಕ್ಷೆ ಇದೀಗ ಹೆಚ್ಚಾಗಿದೆ.

ಇದನ್ನು ಓದಿ : ತುಮಕೂರಿನಲ್ಲಿ ಭೀಕರ Accident.! – ನಾಲ್ವರು ಸ್ಥಳದಲ್ಲೇ ಸಾವು




