Kantara Chapter 1 : ಕಾಂತಾರ ಚಾಪ್ಟರ್-1 ಚಿತ್ರ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅಕ್ಟೋಬರ್ 2ರಂದು ತೆರೆಕಂಡ ಕಾಂತಾರ ಸಿನಿಮಾ ವಿಶ್ವದಾದ್ಯಂತ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Kantara Chapter 1 ಗೆ ಭರ್ಜರಿ ಪ್ರತಿಕ್ರಿಯೆ
ಅಕ್ಟೋಬರ್ 2ರಂದು ತೆರೆಕಂಡಿರುವ ‘ಕಾಂತಾರ ಚಾಪ್ಟರ್-1’ (Kantara Chapter 1) ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಭಾರತೀಯ ಚಿತ್ರರಂಗದಲ್ಲಿ ಇದು ಹೊಸ ಮಾತುಗಳನ್ನು ಹುಟ್ಟಿಸುತ್ತಿದ್ದು, ವಿಶ್ವದಾದ್ಯಂತ ಈ ಚಿತ್ರ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.
ಪ್ರಗತಿ ಶೆಟ್ಟಿಯಿಂದ ಭಾವನಾತ್ಮಕ ಪೋಸ್ಟ್
ಈ ಭರ್ಜರಿ ಯಶಸ್ಸಿನ ಹಿಂದೆ ಕೆಲಸ ಮಾಡಿರುವ ಹಲವಾರು ಮಂದಿ ತಮ್ಮ ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಹಾಗೂ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ.

Kantara Chaper 1 “ಇದು ಕೆಲಸವಲ್ಲ, ಭಾವನೆ”: ಪ್ರಗತಿ ಶೆಟ್ಟಿ
ಪ್ರಗತಿ ಶೆಟ್ಟಿ ತಮ್ಮ ಪೋಸ್ಟ್ನಲ್ಲಿ, “ಕಾಂತಾರ ಚಾಪ್ಟರ್ 1 ಚಿತ್ರದ ಭಾಗವಾಗಿರುವುದು ಅಚ್ಚಳಿಯದ ಪಯಣ. ಈ ದೈವಿಕ ಕಥೆಗೆ ವಸ್ತ್ರ ವಿನ್ಯಾಸಗೊಳಿಸುವುದು ಕೆಲಸಕ್ಕಿಂತ ಹೆಚ್ಚಾಗಿ ಒಂದು ಭಾವನೆ” ಎಂದು ಹೇಳಿದ್ದಾರೆ.
3 ವರ್ಷಗಳ ಶ್ರಮದ ಫಲ
ಈ ಚಿತ್ರದ ಶೂಟಿಂಗ್ ಕಾರ್ಯಾಚರಣೆ ಸುಮಾರು 3 ವರ್ಷಗಳ ಕಾಲ ನಡೆಯಿತು. ಬೃಹತ್ ಬಜೆಟ್ನ ಈ ಚಿತ್ರಕ್ಕೆ ಕೆಲಸ ಮಾಡುವುದು ದೊಡ್ಡ ಜವಾಬ್ದಾರಿಯ ಕೆಲಸವಾಗಿದ್ದು, ಪ್ರಗತಿ ಶೆಟ್ಟಿಯು ವೈಯಕ್ತಿಕ ಮತ್ತು ವೃತ್ತಿಪರವಾಗಿ ರಿಷಬ್ ಶೆಟ್ಟಿಗೆ ಬೆಂಬಲವಾಗಿದ್ದರು.

ಇನ್ನು ಪ್ರಗತಿ ಶೆಟ್ಟಿ ಹಂಚಿಕೊಂಡ ಈ ನೆನಪುಗಳ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರತಂಡದ ಶ್ರಮ, ನಿಷ್ಠೆ, ಮತ್ತು ತೀವ್ರ ಭಾವನೆಗಳು ಪ್ರೇಕ್ಷಕರ ಹೃದಯವನ್ನ ಗೆದ್ದಿವೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾಗೆ ಕೆಲಸ ಮಾಡುವುದು ತುಂಬಾ ಜವಾಬ್ದಾರಿಯುತವಾದ ಕೆಲಸ. ಆ ಕೆಲಸವನ್ನ ಇಡೀ ತಂಡ ಅಚ್ಚುಕಟ್ಟಾಗಿ ನಿಭಾಯಿಸಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಬೆನ್ನೆಲುಬಾಗಿ ಸಾಥ್ ಕೊಟ್ಟಿದ್ದಾರೆ ಪ್ರಗತಿ ಶೆಟ್ಟಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್ ಸೆಟ್ನ ದಿನಗಳನ್ನ ನೆನೆದಿದ್ದಾರೆ.
ಇದನ್ನು ನೋಡಿ : ALERT | ಅಬ್ಬಬ್ಬಾ ..ಇವರು ಅಂತಿಂಥಾ ಕಳ್ಳರಲ್ಲ ಇವ್ರು ಕಣ್ಣಾಕಿದ್ರೆ ಆ ಮನೆ ಉಳಿಯಲ್ಲ | ARSIKERE ROBBERY |




