ಸಿಎಸ್ಕೆಗೆ ಸೇರಲಿದ್ದಾರೆ K.L Rahul ? – ಪೋಸ್ಟ್ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್ ಆರಂಭಕ್ಕೂ ಮುನ್ನ ಫ್ರಾಂಚೈಸಿಗಳ ನಡುವೆ ಬದಲಾವಣೆಗಳ ಮಾತುಗಳು ಕೇಳಿಬರುತ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಫ್ರಾಂಚೈಸಿ ತೊರೆಯುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿದ್ದು, ಅವರು ಚೆನ್ನೈ ಸೂಪರ್ ಕಿಂಗ್ಸ್ ( CSK ) ತಂಡವನ್ನು ಸೇರಬಹುದು ಎಂಬ ಚರ್ಚೆ ಆರಂಭವಾಗಿದೆ.

ಇನ್ಸ್ಟಾ ಪೋಸ್ಟ್ ವೈರಲ್!
ರಾಹುಲ್ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಈ ಊಹಾಪೋಹಗಳಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ಪತ್ನಿ ಅಥಿಯಾ ಶೆಟ್ಟಿ ಅವರೊಂದಿಗೆ ಫೋಟೋ ಹಂಚಿಕೊಂಡಿದ್ದ ರಾಹುಲ್, ಅದಕ್ಕೆ ಹಳದಿ ಬಣ್ಣದ ಎಮೋಜಿ ಬಳಸಿದ್ದರು.
ಇದನ್ನು ಗಮನಿಸಿದ ಅಭಿಮಾನಿಗಳು ಅವರು ಮುಂಬರುವ ಐಪಿಎಲ್ನಲ್ಲಿ ಹಳದಿ ಜೆರ್ಸಿಯ ಚೆನ್ನೈ ತಂಡದ ಪರ ಆಡಲಿದ್ದಾರೆ ಎಂದು ಊಹಿಸುತ್ತಿದ್ದಾರೆ.
ಆದರೆ, ರಾಹುಲ್ ಅವರ ತಂಡ ಬದಲಾವಣೆ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಇದನ್ನು ಓದಿ : ಪ್ರೈಮ್ ವಾಲಿಬಾಲ್ ಲೀಗ್ | ಕನ್ನಡಿಗ KL ರಾಹುಲ್ ಗೋವಾ ತಂಡದ ಕೋ-ಓನರ್

ಹಾರ್ದಿಕ್ ಪಾಂಡ್ಯ ಕೂಡ CSK ಗೆ ಸೇರುವ ಸಾಧ್ಯತೆ?
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮೂಲಕ ಪಡೆದುಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಆಸಕ್ತಿ ತೋರಿಸಿದೆ ಎಂಬ ವರದಿಗಳು ಹೊರಬಿದ್ದಿವೆ.
ವರದಿಗಳ ಪ್ರಕಾರ, ಆಟಗಾರರ ವಿನಿಮಯ ಮತ್ತು ನಗದು ವಹಿವಾಟಿನ ಮೂಲಕ ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು CSK ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನೇರ ಟ್ರೇಡ್ ಮಾಡುವ ಬಗ್ಗೆ ಮಾತುಕತೆ ನಡೆಸಿದೆ ಎನ್ನಲಾಗಿದ್ದು, ಆದರೆ ಆಯುಷ್ ಮ್ಹಾತ್ರೆ ಅವರನ್ನು ಬಿಟ್ಟುಕೊಡಲು ಸಿಎಸ್ಕೆ ಸಿದ್ಧವಿಲ್ಲ ಎಂದು ವರದಿಯಾಗಿದೆ.
ಇದಕ್ಕೆ ಪರ್ಯಾಯವಾಗಿ ಸಿಎಸ್ಕೆ, ಶಿವಂ ದುಬೆ ಮತ್ತು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಜೊತೆಗೆ ₹10 ಕೋಟಿ ಮೊತ್ತದ ಆಫರ್ ನೀಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ರಿಷಬ್ ಪಂತ್-ಕುಲದೀಪ್ ಯಾದವ್ ಟ್ರೇಡ್
ಈ ನಡುವೆ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ರಿಷಬ್ ಪಂತ್ ಹಾಗೂ ಕುಲದೀಪ್ ಯಾದವ್ ಕುರಿತ ಟ್ರೇಡ್ ನಡೆದಿರುವುದಾಗಿ ವರದಿಯಾಗಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎರಡು ಆವೃತ್ತಿಗಳಲ್ಲಿ ಮುನ್ನಡೆಸಿದ್ದ ರಿಷಬ್ ಪಂತ್ ಅವರಿಗೆ ತಂಡವನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ.
ಆಟಗಾರನಾಗಿಯೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ವರದಿಗಳ ಪ್ರಕಾರ, ರಿಷಬ್ ಪಂತ್ ಅವರು ₹12 ಕೋಟಿ ವೇತನ ಕಡಿತದೊಂದಿಗೆ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ.
ಇದನ್ನು ನೋಡಿ : ಶೀಲ ಶಂಕಿಸಿ ಗಂಡನಿಂದ ರಾಕ್ಷಸಿ ಕೃತ್ಯ – ಪತ್ನಿ, ಹಸುಗೂಸುನ್ನ ಕೊಂ ಪಾಪಿ





