IPL 2026 : ಪ್ಲೇಆಫ್ಗೆ ತಂಡಗಳು ಫೈನಲ್ – ವೇಳಾಪಟ್ಟಿ ಹೀಗಿದೆ.

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ. ಲೀಗ್ ಹಂತದ ಬಳಿಕ ಅಗ್ರ ನಾಲ್ಕು ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿವೆ.
ಅಗ್ರ ನಾಲ್ಕು ತಂಡಗಳು ಯಾವ್ಯಾವು?
ಹೌದು.. ಈ ಬಾರಿಯ ಪ್ಲೇಆಫ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟನ್ಸ್ (GT), ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಪ್ರವೇಶ ಪಡೆದಿವೆ. ಉಳಿದ ಆರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

IPL ಕ್ವಾಲಿಫೈಯರ್ 1 ಪಂದ್ಯ
ಪ್ಲೇಆಫ್ನ ಮೊದಲ ಹಂತವಾದ ಕ್ವಾಲಿಫೈಯರ್-1 ಪಂದ್ಯ ಮೇ 26ರಂದು ನಡೆಯಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಮೇ 31ರಂದು ಅಹಮದಾಬಾದ್ನಲ್ಲಿ ನಡೆಯುವ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಲಭ್ಯವಿರುತ್ತದೆ.
READ THIS : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವಿಗೆ ಸ್ಫೋಟಕ ಕಾರಣ ಬಹಿರಂಗ

ಎಲಿಮಿನೇಟರ್ ಪಂದ್ಯ
ಮೇ 27ರಂದು ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಎದುರಾಗಲಿವೆ. ಈ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಗೆಲ್ಲುವ ತಂಡ ಕ್ವಾಲಿಫೈಯರ್-2ಕ್ಕೆ ಪ್ರವೇಶ ಪಡೆಯಲಿದೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಪ್ಲೇಆಫ್ ಹಂತದಲ್ಲಿ ಈಗ ಎಲ್ಲಾ ತಂಡಗಳಿಗೂ ಒತ್ತಡ ಹೆಚ್ಚಿದ್ದು, ಫೈನಲ್ ಕಡೆಗಿನ ಹೋರಾಟ ಇನ್ನಷ್ಟು ರೋಚಕವಾಗಲಿದೆ.

MUST WATCH : ಮೊದಲು ನೀವು ಬೆಲೆ ಇಳಿಸಿ ಅಮೇಲೆ ಮಾತಾಡಿ – ಕೇಂದ್ರ ಸರ್ಕಾರದ ವಿರುದ್ಧ DKS ಕೆಂಡಾಮಡಲ




