ನೆನ್ನೆ ನಡೆದಿದ್ದ ಜಿಂಬಾಬ್ವೆ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿ Vaibhav Sooryavanshi ಮಿಂಚಿದ್ದಾರೆ.

ಭಾರತದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ಜಿಂಬಾಬ್ವೆ ವಿರುದ್ಧ ಭಾನುವಾರ ನಡೆದ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಅವರು, 16 ವರ್ಷ ತುಂಬುವ ಮುನ್ನವೇ ಎರಡು ಟಿ20ಐ ಅರ್ಧಶತಕಗಳನ್ನು ಗಳಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ.
8 ಬೌಂಡರಿ, 4 ಭರ್ಜರಿ ಸಿಕ್ಸರ್
ಈ ಮೂಲಕ ನೇಪಾಳದ ಕುಶಾಲ್ ಮಲ್ಲಾ ಅವರ ದಾಖಲೆಯನ್ನು ಸೂರ್ಯವಂಶಿ ಹಿಂದಿಕ್ಕಿದ್ದಾರೆ. ಪಂದ್ಯದಲ್ಲಿ ವೆಸ್ಲಿ ಮಾಧೇವೆರೆ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ತಮ್ಮ ಎರಡನೇ ಟಿ20ಐ ಅರ್ಧಶತಕವನ್ನು ಪೂರ್ಣಗೊಳಿಸಿದ ಸೂರ್ಯವಂಶಿ, 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ಗಳ ನೆರವಿನಿಂದ 81 ರನ್ ಗಳಿಸಿ ಮಿಂಚಿದರು.
ಇದನ್ನು ಓದಿ : Vaibhav Sooryavanshi ಗೆ 12 ಕೋಟಿ ರೂ. ಸ್ಪಾನ್ಸರ್ಶಿಪ್ ಆಫರ್..?

18 ಎಸೆತಗಳಲ್ಲಿ ತಮ್ಮ ಚೊಚ್ಚಲ T20I ಅರ್ಧಶತಕ
ಜಿಂಬಾಬ್ವೆ ಪ್ರವಾಸದಲ್ಲಿ ಸೂರ್ಯವಂಶಿ ಅಮೋಘ ಪ್ರದರ್ಶನ ನೀಡಿದ್ದು, ಮೊದಲ ಟಿ20 ಪಂದ್ಯದಲ್ಲೇ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ಎರಡನೇ ಪಂದ್ಯದಲ್ಲೂ ಕೇವಲ 9 ಎಸೆತಗಳಲ್ಲಿ 20 ರನ್ ಗಳಿಸಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ್ದರು.
Vaibhav Sooryavanshi ಹೊಸ ಮೈಲಿಗಲ್ಲು
ಈ ಮೊದಲು ನೇಪಾಳದ ಕುಶಾಲ್ ಮಲ್ಲಾ ಅವರು 2020ರ ಫೆಬ್ರವರಿಯಲ್ಲಿ ಅಮೆರಿಕ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದರು. ಇದೀಗ Vaibhav Sooryavanshi ಕೇವಲ 16 ವರ್ಷಕ್ಕೂ ಮುನ್ನವೇ ಎರಡು ಟಿ20ಐ ಅರ್ಧಶತಕಗಳನ್ನು ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿ ಭಾರತೀಯ ಕ್ರಿಕೆಟ್ನ ಭರವಸೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಇದನ್ನು ನೋಡಿ : ಶಿರಾದಲ್ಲಿ ಕೆಂಪೇಗೌಡ ಜಯಂತಿ ಸಂಭ್ರಮ – ತಮಟೆ ನಾದಕ್ಕೆ ಕುಣಿದು ಕುಪ್ಪಳಿಸಿದ ಗಣ್ಯರು




