Tumakuru : ಇತ್ತೀಚೆಗೆ ತುಮಕೂರು ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡು ಬರುತ್ತಿರುವ ಚಿರತೆಗಳಿಂದ ಜನರು ಭಯಭೀತರಾಗಿದ್ದಾರೆ.

Tumakuru : ಈ ನಡುವೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಹರದಗೆರೆ ಗ್ರಾಮದಲ್ಲಿ ಗ್ರಾಮಸ್ಥರ ನಿದ್ರೆ ಕೆಡಿಸುತ್ತಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
ನಿಟ್ಟೂರು ಹೋಬಳಿಯ ದೊಡ್ಡಗುಣಿ ಭಾಗದ ತೀರ್ಥರಾಂಪುರ ಬೀಟ್ ವ್ಯಾಪ್ತಿಗೆ ಸೇರಿದ ಹರದಗೆರೆ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿರತೆ ಸುಮಾರು ಏಳು ಮೇಕೆ ಮತ್ತು ಕುರಿಗಳನ್ನು ಬಲಿ ಪಡೆದಿತ್ತು. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿರಂತರ ಭಯದ ನಡುವೆ ಜೀವನ ನಡೆಸುವಂತಾಗಿತ್ತು.
ಚಿರತೆ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗೋವಿಂದಪ್ಪ ಎಂಬುವರ ಜಮೀನಿನಲ್ಲಿ ಬೋನು ಅಳವಡಿಸಿದರು.
ಇದನ್ನು ಓದಿ : ಮತ್ತೆ ಗಗನಮುಖಿಯಾಯ್ತು Gold Rate – ಇಂದು ಹೆಚ್ಚಾಗಿದ್ದು ಎಷ್ಟು ನೋಡಿ

ಹೆಣ್ಣು ಚಿರತೆ ಬೋನಿಗೆ ಬಿದ್ದು ಸೆರೆ
ಇಂದು ಬೆಳಗಿನ ಜಾವ ಸುಮಾರು ಮೂರು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಚಿರತೆ ಸೆರೆ ಆಗುತ್ತಿದ್ದಂತೆಯೇ ಗ್ರಾಮದಲ್ಲಿ ಆತಂಕ ಕಡಿಮೆಯಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಸೆರೆಗೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಜನರು ಭಯವಿಲ್ಲದೆ ಜೀವನ ನಡೆಸುವ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನು ನೋಡಿ : ಮದುವೆ ಮಾಡಿಸಿದ ಪೂಜಾರಿಗೆ ಲಾಂಗು ಮಚ್ಚು ತೋರ್ಸಿದ್ರಂತೆ ರಾಜೀವ್ ಗೌಡ




