5 ವಿಕೆಟ್ ಕಿತ್ತು WPL ನಲ್ಲಿ ದಾಖಲೆ ಬರೆದ Shreyanka Patil.

ಶುಕ್ರವಾರ ನಡೆದ WPL 2026 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 32 ರನ್ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಕಣಕ್ಕಿಳಿದರು.

ದಾಖಲೆ ಬರೆದ ಕನ್ನಡತಿ
Shreyanka Patil 3.5 ಓವರ್ ಬೌಲಿಂಗ್ ಮಾಡಿ 23 ರನ್ ಕಳೆದುಕೊಳ್ಳುವ ಮೂಲಕ 5 ವಿಕೆಟ್ ಪಡೆದರು. ಈ ಸಾಧನೆಯಿಂದ ಅವರು WPL ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ್ತಿಯಾಗಿದ್ದಾರೆ.
ಇದನ್ನು ಓದಿ : ನಾಯಕತ್ವ ಬದಲಾವಣೆ – ಸಚಿವ Zameer Ahmed ಶಾಕಿಂಗ್ ಸ್ಟೇಟ್ಮೆಂಟ್

WPL ನಲ್ಲಿ ಐದು ವಿಕೆಟ್ ಪಡೆದ ಆಟಗಾರ್ತಿಗಳ ಪಟ್ಟಿ
- 6/15 – ಎಲ್ಲಿಸ್ ಪೆರ್ರಿ (2024)
- 5/15 – ಮರಿಜಾನ್ನೆ ಕಪ್ಪ್ (2023)
- 5/22 – ಆಶಾ ಸೋಭಾನ (2024)
- 5/23 – ಶ್ರೇಯಾಂಕ ಪಾಟೀಲ್ (2026)
- 5/29 – ತಾರಾ ನಾರ್ರಿಸ್ ಬ್ರಾಬೋರ್ನ್ (2023)
- 5/33 – ನಂದನಿ ಶರ್ಮಾ (2026)
- 5/36 – ಕಿಮ್ ಗಾರ್ತ್ (2023)
- 5/38 – ಅಮೆಲಿಯಾ ಕೆರ್ (2025)

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಆರಂಭಿಕ 4 ವಿಕೆಟ್ಗಳನ್ನು ಕಳೆದುಕೊಂಡರೂ, ಮಧ್ಯಮ ಕ್ರಮಾಂಕದ ರಾಧ ಯಾದವ್ ಮತ್ತು ರಿಚಾ ಘೋಷ್ 105 ರನ್ ಕಲೆ ಹಾಕಿ ತಂಡವನ್ನು 182 ರನ್ಗೆ ತಲುಪಿಸಿದರು.
ಗುಜರಾತ್ ಪರ ಸೋಫಿ ಡಿವೈನ್ 3 ವಿಕೆಟ್ ಪಡೆದರೆ, ಕಶ್ವೇ ಗೌತಮ್ 2 ವಿಕೆಟ್ ಪಡೆದುಕೊಂಡರು. ಗುಜರಾತ್ ತಂಡ 150 ರನ್ಗೆ ಆಲೌಟ್ ಆಗಿತು, ಭಾರ್ತಿ ಫುಲ್ಮಾಲಿ 39 ರನ್ನೊಂದಿಗೆ ಗರಿಷ್ಠ ಸ್ಕೋರರ್ ಆಗಿ ಬೆಥ್ ಮೂನಿ 27 ಮತ್ತು ತನುಜಾ ಕನ್ವರ್ 21 ರನ್ ಕೊಡುಗೆ ನೀಡಿದರು.

ಇದನ್ನು ನೋಡಿ : SE*XUAL HARRASMENT | ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ – ACCUSED HETS 5 YEARS JAIL




