‘ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ನಾವು ಒಪ್ಪಿಕೊಳ್ಳುತ್ತೇವೆ’: ಸಚಿವ Zameer Ahmed ಅಚ್ಚರಿ ಹೇಳಿಕೆ.

ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಮತ್ತು ನಾಯಕತ್ವ ಬದಲಾವಣೆಯ ವಿಚಾರ ಮತ್ತೆ ಜೋರಾಗಿ ಸದ್ದು ಮಾಡ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಬೀದಿ ದಾಸಯ್ಯನನ್ನು ಸಿಎಂ ಮಾಡಿದ್ರು ನಾವು ಒಪ್ಪಿಕೊಳ್ಳುತ್ತೇವೆ
ಈ ಮಹತ್ವದ ಬೆಳವಣಿಗೆ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತಾಡಿದ ಜಮೀರ್ ಖಾನ್, ಹೈಕಮಾಂಡ್ ಬೀದಿ ದಾಸಯ್ಯನನ್ನು ಸಿಎಂ ಮಾಡಿದ್ರು ನಾವು ಒಪ್ಪಿಕೊಳ್ಳುತ್ತೇವೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ : ಬಾಗಲಕೋಟೆಯಲ್ಲಿ ಕತ್ತು ಹಿಸುಕಿ ಮಹಿಳೆಯ ಕೊಲೆ! ನಡೆದಿದ್ದೇನು?

ದೆಹಲಿಗೆ ಹೋಗೋದು ಸಹಜ
ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರ ಭೇಟಿ ಮಾತಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ದೆಹಲಿಗೆ ಹೋಗೋದು ಸಹಜ ಎಂದಿದ್ದಾರೆ.
‘ಸಿಎಂ ಬದಲಾವಣೆ ನಮ್ಮ ಕೈಯಲ್ಲಿಲ್ಲ’ – Zameer Ahmed
“ನಾವು ಅಥವಾ ಯಾರೇ ನಾಯಕರು ದೆಹಲಿಗೆ ಹೋದ್ರು ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಸಿಎಂ ಬದಲಾವಣೆ ನಮ್ಮ ಕೈಯಲ್ಲಿಲ್ಲ, ಹೈಕಮಾಂಡ್ ಯಾರನ್ನು ಮಾಡುತ್ತಾರೆ ನಾವು ಒಪ್ಪಿಕೊಳ್ಳುತ್ತೇವೆ” ಎಂದಿದ್ದಾರೆ. ಬೀದಿ ದಾಸಯ್ಯನನ್ನು ಮಾಡಿದ್ರು ನಾವು ಒಪ್ಪಿಕೊಳ್ಳುತ್ತೇವೆ ಎಂದು Zameer Ahmed ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಇದನ್ನು ನೋಡಿ : ಶಿರಾ ಜನರ ಹಲವು ವರ್ಷದ ಕನಸು ನನಸು – ರೈಲ್ವೆ ಕಾಮಗಾರಿಗೆ ನಡಿತು ಭೂಮಿ ಪೂಜೆ




