
TUMAKURU : ಲೈಸೆನ್ಸ್ ಕೊಡೋಕೆ ಲಂಚದ ಬೇಡಿಕೆ – ತುಮಕೂರಲ್ಲಿ ಓ.ಎ. ಲೋಕಾ ಬಲೆಗೆ
ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ, ಕಚೇರಿ ಸಹಾಯಕನೋರ್ವ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಕಚೇರಿ ಸಹಾಯಕ ಗ್ರೇಡ್-1 ಮುರುಳೀಧರ್ ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಲೈಸೆನ್ಸ್ ಕೊಡೋಕೆ ಲಂಚದ ಬೇಡಿಕೆ
ತುಮಕೂರು ತಾಲೂಕಿನ ಹೆಗ್ಗೆರೆ ನಿವಾಸಿ ಉಮಾಶಂಕರ್ ಎಸ್.ಸಿ. ಅವರು ನಗರದಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಸೆಪ್ಟೆಂಬರ್ 25ರಂದು ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದ್ರಂತೆ. ಈ ವೇಳೆ ಕಂದಾಯ ಕಚೇರಿಗೆ ತೆರಳಿದ್ದಾಗ ಮುರುಳೀಧರ್ 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ ಅಕ್ಟೋಬರ್ 6ರಂದು 1 ಸಾವಿರ ಹಣ ಪಡೆದಿದ್ದು, ಉಳಿದ 1 ಸಾವಿರ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನು ಲಂಚ ನೀಡಲು ಇಷ್ಟವಿಲ್ಲದ ಉಮಾಶಂಕರ್ ಈ ಬಗ್ಗೆ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
READ THIS : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ!

TUMAKURU – ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಓ.ಎ.
ಇನ್ನು ದೂರು ಆಧರಿಸಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ನಿರ್ಮಲಾ.ವಿ. ನೇತೃತ್ವದಲ್ಲಿ ಲೋಕಾ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದು, ಇಂದು ಮಧ್ಯಾಹ್ನ ಸಹಾಯಕನ ಚೇಂಬರ್ನಲ್ಲಿ ಉಳಿದ 1 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ, ಲಂಚದ ಹಣ ಸಮೇತ ವಶಕ್ಕೆ ಪಡೆದಿದ್ದಾರೆ. ಸದ್ಯ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ಅನ್ನದ ತಟ್ಟೆ ಮುಂದೆ CM ಯೋಚಿಸಲಿ ಸುಮ್ಮನೆ ಯಾಕೆ ಇವೆಲ್ಲಾ ನಾಟಕ





