Tumakuru : ಭೀಕರ ಅಪಘಾತ, ಕೊಪ್ಪಳ ಮೂಲದ ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ

ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ, ಶಬರಿ ಮಲೆಯಿಂದ ವಾಪಸ್ ಬರುತ್ತಿದ್ದ ಮಗು ಸೇರಿ ನಾಲ್ವರು ಮಾಲಾಧಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ Tumakuru ಬೆಳ್ಳಾವಿ ಕ್ರಾಸ್ ನಡೆದಿದೆ.

ಅಪಘಾತದ ಭೀಕರತೆಗೆ ನಾಲ್ವರು ಸಾವು
ಶಬರಿಮಲೆ ದರ್ಶನ ಮುಗಿಸಿಕೊಂಡು ಮಾಲಾಧಾರಿಗಳು ವಾಪಸ್ ಕೊಪ್ಪಳಕ್ಕೆ ತೆರಳುತ್ತಿದ್ದಾಗ ಈ Accident ಸಂಭವಿಸಿದೆ. ಇನ್ನು ಅಪಘಾತದ ಭೀಕರತೆಗೆ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ,
ಇನ್ನು ಏಳು ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಅಪಘಾತದಲ್ಲಿ ಕೊಪ್ಪಳ ಮೂಲದ ಗದ್ದಿಗೆರೆ ತಾಂಡ ಹಾಗೂ ಕುಕ್ಕನೂರು ಗ್ರಾಮದ 7 ವರ್ಷದ ಸಾಕ್ಷಿ, ಮಾರುತಪ್ಪ, ವೆಂಕಟೇಶ್, ಗವಿಸಿದ್ದಪ್ಪ ಎಂಬುವರು ಮೃತಪಟ್ಟಿದ್ದಾರೆ. ಸದ್ಯ ಮೃತ ದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನು ಓದಿ : Shivamogga|ನೇಣಿಗೆ ಶರಣಾದ ಶಿವಮೊಗ್ಗ KSRTC ಚಾಲಕ..!!

ಅಪಘಾತ ಹೇಗಾಯ್ತು ಅಂತ ಗೊತ್ತಿಲ್ಲ
ಇನ್ನು ಮೃತ ಸಾಕ್ಷಿ ತಂದೆ ಹುಲಿಗಪ್ಪ ಮಾತನಾಡಿ, ಜನವರಿ 5ರಂದು ನಾವು ಶಬರಿಮಲೆಗೆ ತೆರಳಿದ್ದೇವು, ಅಯ್ಯಪ್ಪನ ದರ್ಶನ ಪಡೆದು, ನಿನ್ನೆ ಪಳನಿ ದೇವಸ್ಥಾನಕ್ಕೂ ಭೇಟಿ ನೀಡಿ ವಾಪಸ್ ನಮ್ಮ ಊರಿಗೆ ತೆರಳುತ್ತೀದ್ವೀ. ಕಾರು ಚಾಲಕ ಸೇರಿ ಒಟ್ಟು 11 ಜನ ಶಬರಿಮಲೆಗೆ ಹೋಗಿದ್ದೇವು.
ಆದರೆ ಅಪಘಾತ ಹೇಗಾಯ್ತು ಅಂತ ಗೊತ್ತಿಲ್ಲ. ಇನ್ನು ನನ್ನ ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು.ಆದ್ರೆ ಅಪಘಾತದಲ್ಲಿ ನನ್ನ ಮಗಳನ್ನ ಸಹ ಕಳೆದುಕೊಂಡಿದ್ದೇನೆ ಎಂದು ನೋವನ್ನ ತೋಡಿಕೊಂಡ್ರು.

ಪ್ರಕರಣ ದಾಖಲು
ಒಟ್ನಲ್ಲಿ ಅಯ್ಯಪ್ಪನ ದರ್ಶನ ಪಡೆದು ಸುಖವಾಗಿ ಮನೆಗೆ ತಲುಪಬೇಕೆಂಬ ಆಶಯದಲ್ಲಿ ವಾಪಸ್ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಮಗು ಸೇರಿ ನಾಲ್ವರ ಜೀವವನ್ನ ಜವರಾಯ ಕಸಿದಿದ್ದಾನೆ.
ಸದ್ಯ ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಇದನ್ನು ನೋಡಿ : SIDDAGANGA MATTA |ಮಠದ ಹೆಸರಲ್ಲಿ ಜನರಿಗೆ ವಸೂಲಿ ದಂಧೆ – ಯಾರನ್ನೂ ನೇಮಿಸಿಲ್ಲವೆಂದು ಸ್ಪಷ್ಟನೆ




