Shivamogga : ಡಿಪೋ ಮ್ಯಾನೇಜರ್ ಕಿರುಕುಳ ಆರೋಪ: ನೇಣಿಗೆ ಶರಣಾದ KSRTC ಚಾಲಕ..ಬಸ್ನಲ್ಲೇ ಮೃತದೇಹ ರವಾನೆ, ಸಾಗರದಲ್ಲಿ ದುರ್ಘಟನೆ

Shivamogga ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಡಿಪೋ ಮ್ಯಾನೇಜರ್ ಕಿರುಕುಳ ಹಾಗೂ ಕರ್ತವ್ಯ ನೀಡದಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಡ್ಯೂಟಿ ಸಿಗದೆ ಮನನೊಂದು ಆತ್ಮಹತ್ಯೆ
ಮೃತ ಚಾಲಕನನ್ನು ನಾಗಪ್ಪ (54) ಎಂದು ಗುರುತಿಸಲಾಗಿದೆ. ಅವರು ಸಾಗರ ತಾಲೂಕಿನ ಆನಂದಪುರ ಸಮೀಪದ ತ್ಯಾಗರ್ತಿ ಗ್ರಾಮದಲ್ಲಿ ವಾಸವಿದ್ದರು.
ಕಳೆದ ಒಂದೂವರೆ ತಿಂಗಳಿಂದ ಡ್ಯೂಟಿ ನೀಡದೆ ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.
ಹಲವು ಬಾರಿ ಡ್ಯೂಟಿ ಸಿಗದೇ ನಾಗಪ್ಪ ಮನೆಗೆ ವಾಪಸ್ ಬಂದಿದ್ದು, ಇದರಿಂದ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು.
ಇದನ್ನು ಓದಿ : ಬೆಚ್ಚಿ ಬೀಳಿಸೋ ಕೃತ್ಯ – ಮುಗ್ಧ ಮಗುವಿನ ಕತ್ತು ಹಿಸುಕಿ Murder!
ಕಳೆದ ಸೋಮವಾರ ನಾಗಪ್ಪ ಅವರು ಮನೆಯಲ್ಲೇ ನೇಣಿಗೆ ಶರಣಾಗಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ಬಳಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ
ನಾಗಪ್ಪ ಅವರ ನಿಧನದ ಸುದ್ದಿ ತಿಳಿದ ಬಳಿಕ ಕೆಎಸ್ಆರ್ಟಿಸಿ ನೌಕರರು ಅಂತಿಮ ದರ್ಶನ ಪಡೆದರು.
ಅಷ್ಟೇ ಅಲ್ಲದೆ, ಮೃತ ಚಾಲಕನ ಮೃತದೇಹವನ್ನು ಕೆಎಸ್ಆರ್ಟಿಸಿ ಬಸ್ನಲ್ಲೇ ಊರಿಗೆ ರವಾನೆ ಮಾಡಿರುವುದು ಗಮನ ಸೆಳೆದಿದೆ.
ಪೊಲೀಸ್ ತನಿಖೆ ಆರಂಭ
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಪೋ ಮ್ಯಾನೇಜರ್ ಕಿರುಕುಳ ಆರೋಪದ ಕುರಿತು ತನಿಖೆ ಆರಂಭಿಸಲಾಗಿದೆ.
ಇದನ್ನು ನೋಡಿ : ಸಿದ್ದರಾಮಯ್ಯಗೆ ಟವೆಲ್ ಸುತ್ಕೊಂಡು ಹೊಡೆದ್ರಾ ಶಾಸಕ ಎಂ.ಟಿ.ಕೃಷ್ಣಪ್ಪ




