Gold Rate ಭರ್ಜರಿ ಇಳಿಕೆ – ಹತ್ತು ಗ್ರಾಮ್ಗೆ 2,050 ರೂ ಕುಸಿತ

ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಂದು, ಆಗಸ್ಟ್ 14ರಂದು, ಗಮನಾರ್ಹ ಇಳಿಕೆ ಕಂಡುಬಂದಿದೆ. ಹಳದಿ ಲೋಹದ ಬೆಲೆ ಗ್ರಾಮ್ಗೆ ಸುಮಾರು ₹205ರಷ್ಟು ಕುಸಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ Gold Rate ಇಳಿಮುಖವಾಗಿದ್ದು, ಬೆಳ್ಳಿ ದರದಲ್ಲೂ ಬದಲಾವಣೆ ಕಂಡುಬಂದಿದೆ.
ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,40,150 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,52,890 ಇದೆ. ಬೆಳ್ಳಿಯ ಬೆಲೆ 100 ಗ್ರಾಂಗೆ ₹25,500ರಷ್ಟಿದೆ. ಬೆಂಗಳೂರಿನಲ್ಲೂ ಇದೇ ದರ ದಾಖಲಾಗಿದೆ.
ಆಗಸ್ಟ್ 14ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
- 24 ಕ್ಯಾರಟ್ ಚಿನ್ನ: 1 ಗ್ರಾಂಗೆ ₹15,289
- 22 ಕ್ಯಾರಟ್ ಚಿನ್ನ: 1 ಗ್ರಾಂಗೆ ₹14,015
- 18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹11,467
- ಬೆಳ್ಳಿ: 1 ಗ್ರಾಂಗೆ ₹255

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹14,015/ಗ್ರಾಂ
- ಚೆನ್ನೈ: ₹14,015/ಗ್ರಾಂ
- ಮುಂಬೈ: ₹14,015/ಗ್ರಾಂ
- ದೆಹಲಿ: ₹14,030/ಗ್ರಾಂ
- ಕೋಲ್ಕತಾ: ₹14,015/ಗ್ರಾಂ
- ಕೇರಳ: ₹14,015/ಗ್ರಾಂ
- ಅಹ್ಮದಾಬಾದ್: ₹14,020/ಗ್ರಾಂ
- ಜೈಪುರ: ₹14,030/ಗ್ರಾಂ
- ಲಕ್ನೋ: ₹14,030/ಗ್ರಾಂ
- ಭುವನೇಶ್ವರ್: ₹14,015/ಗ್ರಾಂ
ಬೆಳ್ಳಿ ದರದಲ್ಲೂ ನಗರವಾರು ವ್ಯತ್ಯಾಸ
ಬೆಂಗಳೂರಿನಲ್ಲಿ ಬೆಳ್ಳಿ 1 ಗ್ರಾಂಗೆ ₹255 ಇದ್ದರೆ, ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ ₹260ರಷ್ಟಿದೆ. ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ಹಾಗೂ ಪುಣೆಯಲ್ಲಿ 1 ಗ್ರಾಂ ಬೆಳ್ಳಿ ₹255ರಷ್ಟಿದೆ.
ಇದನ್ನು ಓದಿ : ಭಾರತದಲ್ಲಿ ಚಿನ್ನದ ಬೆಲೆ ತುಸು ಹೆಚ್ಚಳ – ರೇಟ್ ಚೆಕ್ ಮಾಡಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ Gold Rate
ಸ್ಪಾಟ್ ಗೋಲ್ಡ್ ಬೆಲೆ 1 ಗ್ರಾಂಗೆ 139.05 ಡಾಲರ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹13,267ರಷ್ಟಿದೆ. ಸ್ಪಾಟ್ ಸಿಲ್ವರ್ ದರ 1 ಗ್ರಾಂಗೆ 2.056 ಡಾಲರ್, ಅಂದರೆ ಸುಮಾರು ₹196.
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರ ಹೀಗಿದೆ:
- ಭಾರತ: ₹15,289
- ಮಲೇಷ್ಯಾ: ₹13,571
- ದುಬೈ: ₹13,692
- ಅಮೆರಿಕ: ₹13,692
- ಸಿಂಗಾಪುರ: ₹14,089
- ಕತಾರ್: ₹13,833
- ಸೌದಿ ಅರೇಬಿಯಾ: ₹13,800
- ಓಮನ್: ₹13,830
- ಕುವೇತ್: ₹13,581
ಭಾರತದಲ್ಲಿ ಚಿನ್ನದ ಬೆಲೆ ಇತರ ಹಲವು ದೇಶಗಳಿಗೆ ಹೋಲಿಸಿದರೆ ಹೆಚ್ಚಾಗಿರುವುದಕ್ಕೆ ಆಮದು ಸುಂಕ, ಜಿಎಸ್ಟಿ ಸೇರಿದಂತೆ ವಿವಿಧ ತೆರಿಗೆಗಳು ಮತ್ತು ಸ್ಥಳೀಯ ಮಾರುಕಟ್ಟೆ ವೆಚ್ಚಗಳು ಪ್ರಮುಖ ಕಾರಣಗಳಾಗಿವೆ.

ಇದನ್ನು ನೋಡಿ : ಶಾಲೆಗಳ TV ಖರೀದಿಯಲ್ಲಿ ಗೋಲ್ಮಾಲ್ – ARSIKEREಯಲ್ಲಿ ಅವ್ಯವಹಾರದ ಆರೋಪ




