30 ಪ್ರಯಾಣಿಕರಿದ್ದ ಬಸ್ ಭೀಕರ Accident – ಶಿವಮೊಗ್ಗದಲ್ಲಿ ಬ್ರಿಡ್ಜ್ನಿಂದ ಉರುಳಿ ಭಾರೀ ಅನಾಹುತ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕಾಗೆಹಳ್ಳ ಗ್ರಾಮದ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದಾವಣಗೆರೆ ಜಿಲ್ಲೆಯಿಂದ ಭದ್ರಾವತಿಗೆ ಬರುತ್ತಿದ್ದ ‘ಶ್ರೀ ರೇಣುಕಾಂಬ’ ಖಾಸಗಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ, ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

READ THIS : IPL ಪಂದ್ಯದಲ್ಲಿ ಧೋನಿ ಫ್ಯಾನ್ಸ್ಗೆ ಬಿಗ್ ಶಾಕ್! ಮೊದಲ 6 ಪಂದ್ಯಗಳಿಗೆ ಧೋನಿ ಅಲಭ್ಯ
ಹಲವರ ಸ್ಥಿತಿ ಗಂಭೀರ
ಬಸ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ದೂರಿದ್ದಾರೆ. ಇನ್ನು ಈ Accident ನಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Accident – ಪೊಲೀಸರಿಂದ ಪರಿಶೀಲನೆ
ಘಟನೆಯ ನಂತರ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಗುರುತಿಸಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
MUST WATCH : ತಿಪಟೂರಿಗೆ ದೊಡ್ಮನೆ ಕುಡಿ ವಿಸಿಟ್ – ವಿನಯ್ ಸರಳತೆ ಹೇಗಿದೆ ನೋಡಿ ?




