ಎಲಿಮಿನೇಟರ್ ಪಂದ್ಯದಲ್ಲಿ SRH ವಿರುದ್ಧ ಗೆದ್ದು ಬೀಗಿದ RR.

ಚಂಡೀಗಢದಲ್ಲಿ ನಡೆದ IPL ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಸಿಡಿಲಬ್ಬರದ ಪ್ರದರ್ಶನ ನೀಡಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ 47 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಹೈದರಾಬಾದ್ ತಂಡದ ಈ ಸೀಸನ್ ಪಯಣ ಅಂತ್ಯಗೊಂಡಿದೆ. ಇನ್ನೊಂದೆಡೆ ರಾಜಸ್ಥಾನ್ ಫೈನಲ್ ಪ್ರವೇಶದತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದು, ಕ್ವಾಲಿಫೈಯರ್-2ರಲ್ಲಿ ಗುಜರಾತ್ ಟೈಟನ್ಸ್ (GT) ವಿರುದ್ಧ ಸೆಣಸಾಡಲಿದೆ.

‘ಸೂರ್ಯ’ವಂಶಿ ಅಬ್ಬರಕ್ಕೆ ಸನ್ ಬರ್ನ್
ರಾಜಸ್ಥಾನ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದರು. ಅವರ ಇನಿಂಗ್ಸ್ನಲ್ಲಿ 12 ಭರ್ಜರಿ ಸಿಕ್ಸರ್ ಹಾಗೂ 5 ಫೋರ್ಗಳಿದ್ದವು. ಜೊತೆಗೆ ಧ್ರುವ್ ಜುರೇಲ್ ಅರ್ಧ ಶತಕ ಬಾರಿಸಿ ತಂಡಕ್ಕೆ ಬಲ ನೀಡಿದರು. ಯಶಸ್ವಿ ಜೈಸ್ವಾಲ್ 29 ಹಾಗೂ ನಾಯಕ ರಿಯಾನ್ ಪರಾಗ್ 26 ರನ್ಗಳ ಕೊಡುಗೆ ನೀಡಿದರು. ಅಂತಿಮವಾಗಿ ರಾಜಸ್ಥಾನ್ 240ಕ್ಕೂ ಹೆಚ್ಚು ರನ್ಗಳ ಬೃಹತ್ ಮೊತ್ತ ಕಲೆಹಾಕಿತು.

ಆರಂಭದಲ್ಲೇ ಆಘಾತ
244 ರನ್ಗಳ ಗುರಿ ಬೆನ್ನತ್ತಿದ ಹೈದರಾಬಾದ್ಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ಮೊದಲ ಓವರ್ನಲ್ಲೇ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ಬಳಿಕ ನಿತೀಶ್ ಕುಮಾರ್ ರೆಡ್ಡಿ 38, ಇಶಾನ್ ಕಿಶನ್ 33 ಹಾಗೂ ಇತರ ಬ್ಯಾಟರ್ಗಳು ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಇದನ್ನು ಓದಿ : ಇಂದು SRH vs RR ಎಲಿಮಿನೇಟರ್ ಪಂದ್ಯ – ಗೆದ್ರೆ ಫಿನಾಲೆಗೆ, ಸೋತ್ರೆ ಮನೆಗೆ

RR ನ ಜೋಫ್ರಾ ಆರ್ಚರ್ ಬೌಲಿಂಗ್ ದಾಳಿಗೆ SRH ತತ್ತರ
ಆರ್ಆರ್ನ ಜೋಫ್ರಾ ಆರ್ಚರ್ ಬೌಲಿಂಗ್ ದಾಳಿಗೆ ಎಸ್ಆರ್ಹೆಚ್ ಬ್ಯಾಟರ್ಗಳು ತತ್ತರಿಸಿದರು. ಆರ್ಚರ್ ಮೂರು ವಿಕೆಟ್ ಪಡೆದರು. ನಾಂಡ್ರೆ ಬರ್ಗರ್, ಸುಶಾಂತ್ ಮಿಶ್ರಾ, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಸಹಕಾರಿಯಾದರು. ಯಶ್ ರಾಜ್ ಪೂಂಜಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




