Rahul Tewatia ಅವರು IPL 2026 Qualifier 1 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಧೋನಿ ದಾಖಲೆ ಮುರಿದಿದ್ದಾರೆ.

IPL 2026ರ ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs GT) ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಾಹುಲ್ ತೆವಾಟಿಯಾ ಅವರು ಅರ್ಧಶತಕ ಬಾರಿಸುವ ಮೂಲಕ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಸಾರ್ವಕಾಲಿಕ ಐಪಿಎಲ್ ದಾಖಲೆಯೊಂದನ್ನು ಮುರಿದ್ದಾರೆ.
255 ರನ್ಗಳ ಬೃಹತ್ ಗುರಿ
ಹಾಲಿ ಚಾಂಪಿಯನ್ ಆರ್ಸಿಬಿ ನೀಡಿದ 255 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ ತೆವಾಟಿಯಾ ಮಾತ್ರ ದಿಟ್ಟ ಹೋರಾಟ ನಡೆಸಿದರು. 43 ಎಸೆತಗಳನ್ನು ಎದುರಿಸಿದ ಅವರು 68 ರನ್ಗಳ ಅದ್ಭುತ ಇನಿಂಗ್ಸ್ ಕಟ್ಟಿದರು. ಅವರ ಇನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ಗಳು ಹಾಗೂ ಎಂಟು ಬೌಂಡರಿಗಳು ಸೇರಿದ್ದವು.
ಇದನ್ನು ಓದಿ : ಇಂದು SRH vs RR ಎಲಿಮಿನೇಟರ್ ಪಂದ್ಯ – ಗೆದ್ರೆ ಫಿನಾಲೆಗೆ, ಸೋತ್ರೆ ಮನೆಗೆ

ಅತ್ಯಧಿಕ ಸ್ಕೋರ್ ದಾಖಲಿಸಿದ ಆಟಗಾರ
ಈ ಪ್ರದರ್ಶನದೊಂದಿಗೆ ತೆವಾಟಿಯಾ, ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತ್ಯಧಿಕ ಸ್ಕೋರ್ ದಾಖಲಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಈ ಹಿಂದೆ ಈ ದಾಖಲೆ MS Dhoni ಹೆಸರಿನಲ್ಲಿತ್ತು. ಧೋನಿ ಅವರು 2013ರ ಐಪಿಎಲ್ ಫೈನಲ್ನಲ್ಲಿ MI ವಿರುದ್ಧ 45 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದ್ದರು.
ಐಪಿಎಲ್ ಪ್ಲೇಆಫ್ಗಳಲ್ಲಿ ಅತ್ಯಧಿಕ ಸ್ಕೋರ್ಗಳು (7ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್)
- ರಾಹುಲ್ ತೆವಾಟಿಯಾ – 68 (43), 2026 vs RCB
- ಎಂ. ಎಸ್ ಧೋನಿ – 63* (45), 2013 vs MI
- ಬ್ರಾಡ್ ಹಾಡ್ಜ್ – 54* (29), 2013 vs SRH
- ಆಡ್ರೆ ರಸೆಲ್ – 49* (25), 2018 vs RR
- ಕಾರ್ಲೋಸ್ ಬ್ರಾಥ್ವೈಟ್ – 43* (29), 2018 vs CSK

ಇದನ್ನು ನೋಡಿ : MADHUGIRIಯಲ್ಲಿ ಮಳೆಗೆ ಚರಂಡಿ ಬ್ಲಾಕ್ – ಮನೆಗಳಿಗೆ ನುಗ್ಗಿದ ಚರಂಡಿ ನೀರು..!




