ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕು ನಕ್ಕನಹಳ್ಳಿ ಗ್ರಾಮದ ಯುವ ರೈತ ಪ್ರಭಾಕರ್ ಅವರ ದ್ರಾಕ್ಷಿ ತೋಟದಲ್ಲಿ ವಾಮಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಮ್ಮ ದ್ರಾಕ್ಷಿ ತೋಟದಲ್ಲಿ ಯಾರೋ ದುಷ್ಕರ್ಮಿಗಳು ಕ್ಷುದ್ರ ಪೂಜೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಪ್ರಭಾಕರ್ ಮಾಡಿದ್ದಾರೆ.
ಮಾಹಿತಿಯಂತೆ, ಇಬ್ಬರೆ ಎಕರೆ ಜಮೀನಿನಲ್ಲಿ ‘ಬೆಂಗಳೂರು ಬ್ಲೂ’ ದ್ರಾಕ್ಷಿ ಬೆಳೆದಿರುವ ಪ್ರಭಾಕರ್, ಸಾಲ ಮಾಡಿಕೊಡಿಸಿಕೊಂಡು ತೋಟಕ್ಕೆ ಪ್ರಾಣಪಣವಾಗಿ ಕೆಲಸ ಮಾಡಿದ್ದಾರೆ. ಫಸಲು ಕಟಾವು ಹಂತ ತಲುಪಿರುವ ಸಮಯದಲ್ಲಿ, ತೋಟದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ನೀರಿನ ಸಂಪಿನಲ್ಲಿ ಹಾಗೂ ಗಿಡಗಳ ಬಳಿ ವಾಮಚಾರದ ಸರಂಜಾಮುಗಳಾದ ಮೊಟ್ಟೆ ಹಾಗೂ ಇತರೆ ಪವಾಡ ಸಾಮಗ್ರಿಗಳು ಪತ್ತೆಯಾಗಿವೆ.
ಗ್ರಾಮದ ಯುವ ರೈತ ಪ್ರಭಾಕರ್, ಸಾಲ ಸೂಲ ಮಾಡಿ ಎರಡುವರೆ ಎಕರೆ ಜಮೀನಿನಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದಾರೆ. ಫಸಲು ಇನ್ನೇನು ಕಟಾವು ಮಾಡಬೇಕು. ಅಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಇವರ ತೋಟದ ಮೇಲೆ ಕಣ್ಣು ಹಾಕಿದ್ದಾರೆ. ಪರಿಣಾಮ ತೋಟದ ಮೂಲೆ ಮೂಲೆ ಸೇರಿದಂತೆ ನೀರಿನ ಸಂಪಿನಲ್ಲಿ ಮಂತ್ರಿಸಿದ ಮೊಟ್ಟೆ ಇಟ್ಟು ಪೂಜೆ ಮಾಡಿದ್ದಾರೆ. ಇದರಿಂದ ಇದು ಮಾಟಮಂತ್ರದ ಕುರುವು ಅಂತ ರೈತ ಬೇಸರ ವ್ಯಕ್ತಪಡಿಸಿದ್ದಾನೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ನಂದಿಗಿರಿಧಾಮ ಪೊಲೀಸ್ ಠಾಣೆಗೆ ಪ್ರಭಾಕರ್ ದೂರು ಸಲ್ಲಿಸಿದ್ದಾರೆ. "ಇದು ಕೇವಲ ಮಾಟಮಂತ್ರವಲ್ಲ, ನನ್ನ ಜೀವನಾಧಾರವಾದ ತೋಟದ ಮೇಲೆ ಕಣ್ಣು ಹಾಕಿದ ದುಷ್ಕರ್ಮಿಗಳ ದ್ವೇಷದ ಕೃತ್ಯ," ಎಂದು ರೈತ ಪ್ರಭಾಕರ್ ಅವರು ಆರೋಪಿಸಿದ್ದಾರೆ.