ರಾಯಚೂರು : ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ರಾಯಚೂರು ಗ್ರಾಮೀಣ, ಪೊಲೀಸರು ಅರೆಸ್ಟ್ ಮಾಡಿದ್ದು, ಬಂಧಿತನಿಂದ 76ಗ್ರಾಂ ಚಿನ್ನ ಮತ್ತು 382 ಗ್ರಾಂ ಬೆಳ್ಳಿ ಆಭರಣವನ್ನು, ಕೈಗಡಿಯಾರಗಳನ್ನು, ಕ್ಯಾಮರಾಗಳನ್ನು ಸೇರಿ ಒಟ್ಟು 7.89 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಯನ್ನು ರಾಯಚೂರಿನ ಎಲ್‌ಬಿಎಸ್ ನಗರದ ವರೇಶ್ ಎಂದು ಗುರುತಿಸಲಾಗಿದ್ದು, ಇವನು ಜಿಲ್ಲೆಯ ಹಲವಾರು ಕಡೆಯಲ್ಲಿ ಮನೆಗಳ್ಳತನವನ್ನು ಮಾಡಿದ್ದು, ಆರೋಪಿ ವಿರೇಶ್ ನ ಮೇಲೆ ರಾಯಚೂರಿನ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇನನ್ನು ಪೋಲೀಸರು ರಾಯಚೂರು ಗ್ರಾಮೀಣ, ಮಾನ್ವಿ ಮತ್ತು ಸಿಂಧನೂರು ಠಾಣೆಯ ವ್ಯಾಪ್ತಿಯಲ್ಲಿ ಖಳ್ಳತನದ ವಸ್ತುಗಳನ್ನು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಆರೋಪಿಗಳಿಗೆ ಪೋಲೀಸರು ಬಲೆ ಬೀಸಿದ್ದಾರೆ.