ತುಮಕೂರು : ಸರ್ಕಾರ, ಗೃಹ ಸಚಿವರ ತಲೆ ಬಿಸಿ ಮಾಡಿದ ಡಿಸಿ ಆದೇಶ

ತುಮಕೂರು : ಗೃಹ ಸಚಿವರ ತವರು ಜಿಲ್ಲೆಯಲ್ಲೇ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ತೋರಿದ್ರಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿರೋದು ತುಮಕೂರಿನ ಡಿಸಿ ಹೊರಡಿಸಿರೋ ಆದೇಶದಿಂದ. ಹೌದು ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ನಡೆಸುವುದಾದ್ರೆ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಪರ್ಮಿಷನ್‌ ತಗೋಬೇಕು ಅಂತಾ ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಇತ್ತೀಚಿಗೆ ಆದೇಶ ಹೊರಡಿಸಿದ್ದು, ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ತಲೆ ಬಿಸಿಯಾಗಿದೆ.

ಕಳೆದ 20ರಿಂದ 25 ದಿನಗಳ ಹಿಂದೆ ನಿವೇಶನ ಹಕ್ಕಿಗಾಗಿ ಡಿಸಿ ಕಚೇರಿ ಮುಂದೆ ಸತತ 17 ದಿನಗಳ ಕಾಲ ಹೋರಾಟ ಮಾಡ್ತೀದ್ದ ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರರ ಮೇಲೆ ಜಿಲ್ಲಾಡಳಿತದಿಂದ ಬಂಧನ ಅಸ್ತ್ರ ಪ್ರಯೋಗದ ಬೆನ್ನಲ್ಲೇ, ಇನ್ನು ಮುಂದೆ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಬೇಕು ಅಂದ್ರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಆದೇಶ ಹೊರಡಿಸಿದ್ರು. ಪ್ರತಿಭಟನೆಗೆ ಅನುಮತಿ ತೆಗೆದುಕೊಳ್ಳಬೇಕು ಅಂತಾ ಅದ್ಯಾವಾಗ ಆದೇಶ ಹೊರಬಿತ್ತೋ, ತುಮಕೂರು ಸೇರಿ ರಾಜ್ಯದ ಹೋರಾಟಗಾರರು ಡಿಸಿ ವಿರುದ್ಧ ತಿರುಗಿಬಿದ್ದಿದ್ದಾರೆ. ಕೂಡಲೇ ಈ ಆದೇಶವನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿಸ್ತಾ ಇದ್ದಾರೆ.

ಇನ್ನು ಈ ಬಗ್ಗೆ ನಗರದಲ್ಲಿ ರಾಜ್ಯ ಹಕ್ಕು ಮತ್ತು  ವಸತಿ ಸಮಿತಿಯ ರಾಜ್ಯ ಘಟಕದ ಮುಖಂಡರಾದ ರಾಜ್ಯ ಹೋರಾಟಗಾರಾದ ಶ್ರೀರಂಗಾಚಾರ್, ನಾಗರಾಜು ಸಿರಿಮನೆ ಸೇರಿ ಹಲವು ಮಂದಿ ಹೋರಾಟಗಾರರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ರು. ತುಮಕೂರಿನಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ದಬ್ಬಾಳಿಕೆ ಖಂಡಿಸಿದ ಹೋರಾಟಗಾರರು, ಅನುಮತಿ ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಡಿಸಿ, ಸರ್ಕಾರದ ವಿರುದ್ಧ ಹೋರಾಟದ ಸಮರ ಸಾರುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ರು. ಅಲ್ದೇ ಭೂಮಿ ಹಕ್ಕು ಮತ್ತು ವಸತಿ ತಿ ಹಕ್ಕು ಹೋರಾಟಗಾರರ ಸಮಸ್ಯೆಗೆ ಈವರೆಗೂ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಈವರೆಗೂ ಸ್ಪಂದಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡೋದು ನಮ್ಮ ಹಕ್ಕು, ನಾವು ಯಾವುದೇ ತೊಂದರೆ ಕೊಡುದಿಲ್ಲ ನಮಗೆ ಹೋರಾಟ ಮಾಡಲು ಬಿಡಿ ಎಂದು ಹೋರಾಟಗಾರರು ಆಗ್ರಹಿಸಿದ್ರು.

ಅದೇನೆ ಆಗಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಅವಕಾಶ ಇದೆ. ಅವರ ಹೊರಾಟದ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಹಾಗೆಯೇ ಹೋರಾಟ ಮಾಡಲು ಪರ್ಮಿಷನ್‌ ತೆಗೆದುಕೊಳ್ಳಬೇಕು ಅನ್ನೋದು ನ್ಯಾಯ. ಆದ್ರೆ ಒಂದೇ ಬಾರಿ ಹತ್ತು ಹತ್ತು ಇಲಾಖೆಗಳಿಂದ ಒಮ್ಮೆಯೇ ಪರ್ಮಿಷನ್‌ ತಗೊಬೇಕು ಅನ್ನೋದು ಯಾವ ನ್ಯಾಯ. ಇನ್ನಾದ್ರು ಈ ಬಗ್ಗೆ ಡಿಸಿ ಶುಭಕಲ್ಯಾಣ್‌ ಎಚ್ಚರದಿಂದ ಹೆಜ್ಜೆಯನ್ನಿಟ್ಟು ಕಳಂದಿಂದ ದೂರ ಆಗ್ತಾರಾ ಎಂದು ಕಾದುನೋಡಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews