ತುಮಕೂರು : ಮಹಾನಗರ ಪಾಲಿಕೆ, ಕೆಇಬಿ, ಬೆಸ್ಕಾಂ ಹಾಗೂ ಜಿಲ್ಲಾಡಳಿತದ ಕೆಲ ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿ ನೆನಪಿಸುತ್ತಿದೆ. ತುಮಕೂರಿನಲ್ಲಿ ಕೆಇಬಿ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಬಹುತೇಕ ಕಡೆಗಳಲ್ಲಿನ ವಿದ್ಯುತ್ ಬಾಕ್ಸ್‌ಗಳು ಓಫನ್ ಆಗಿದ್ದವು. ಇದ್ರಿಂದಾಗಿ ಸಾರ್ವಜನಿಕರ ಜೀವಕ್ಕೆ ಕುತ್ತು ಕಟ್ಟಿಟ್ಟಬುತ್ತಿಯಾಗಿತ್ತು. ನಿನ್ನೆ ಈ ಕುರಿತು ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ಸ್ಥಳಕ್ಕೆ ದೌಡಾಯಿಸಿ ವಿದ್ಯುತ್ ಬಾಕ್ಸ್‌ಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್.
ಹೌದು, ನಗರದ ಪ್ರಮುಖ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಾಕ್ಸ್‌ಗಳು ಮುಚ್ಚದೇ ಓಪನ್ ಆಗಿದ್ದವು. ಉಪ್ಪಾರಳ್ಳಿಯ ಬ್ರಿಡ್ಜ್ ಕೆಳಭಾಗದಲ್ಲಿದ್ದ ವಿದ್ಯುತ್ ಬಾಕ್ಸ್ ಕೂಡ ಓಪನ್ ಆಗಿತ್ತು. ಅದು ಹೇಳಿ ಕೇಳಿ ಪುಡ್ ಸ್ಟ್ರೀಟ್. ಆದ್ದರಿಂದ ಅಲ್ಲಿಗೆ ಸಾರ್ವಜನಿಕರು ಹೋಗ್ತಾನೆ ಇರ್ತಾರೆ. ಇಂತಹ ಓಪನ್ ಆಗಿರುವ ವಿದ್ಯುತ್ ಬಾಕ್ಸ್‌ಗಳಿಂದಾಗಿ ಯಾವಾಗ ಬೇಕಾದ್ರು ಸಾವು-ನೋವು ಸಂಭವಿಸಬಹುದೆಂದು ವರದಿ ಮಾಡಿತ್ತು. ನಮ್ಮ ವರದಿಗೆ ಎಚ್ಚೆತ್ತ ಕೆಇಬಿ ಮತ್ತು ಬೆಸ್ಕಾಂ ಅಧಿಕಾರಿಗಳು ಇಂದು ನಗರ ಬಹುತೇಕ ಕಡೆಗಳಿಗೆ ಭೇಟಿ ನೀಡಿದ್ರು. ಓಪನ್ ಆಗಿರುವ ವಿದ್ಯುತ್ ಬಾಕ್ಸ್‌ಗಳನ್ನ ಮುಚ್ಚುವ ಕೆಲಸ ಮಾಡಿದ್ದಾರೆ. ಉಪ್ಪಾರಹಳ್ಳಿ ಬ್ರಿಡ್ಜ್ ಕೆಳಭಾಗದಲ್ಲಿ ಓಪನ್ ಇದ್ದ ವಿದ್ಯುತ್ ಬಾಕ್ಸ್ ಮುಚ್ಚುವ ಕೆಲಸ ಕೂಡ ಮಾಡಿದ್ದಾರೆ.