ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ AI ಟಚ್ | ವಾಟ್ಸಾಪ್‌ ನಲ್ಲೇ ಸಿಗಲಿವೆ ಸುಗಮ ಸೇವೆಗಳು

ತುಮಕೂರು:

ಸ್ಮಾರ್ಟ್‌ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್‌ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್‌ ನ್ಯೂಸ್‌ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ. ಅಲ್ಲದೇ ತೆರಿಗೆ ಪಾವತಿ, ನೀರು ಮತ್ತು ಯುಜಿಡಿ ಶುಲ್ಕ ಸೇರಿದಂತೆ ಹಲವು ಬಿಲ್‌ಗಳನ್ನು ಕಟ್ಟಲು ಪಾಲಿಕೆಯಲ್ಲಿ ಅಲೆದಾಡುವ ಅವಶ್ಯಕತೆಯಿಲ್ಲ, ಏಕೆಂದರೆ ಎಲ್ಲಾ ಸೇವೆಗಳು ಈಗ ನಿಮ್ಮ ಅಂಗೈಯಲ್ಲೇ ಸಿಗಲಿದೆ. ತುಮಕೂರು ಮಹಾನಗರ ಪಾಲಿಕೆ ನಾಗರೀಕರ ಅನುಕೂಲಕ್ಕಾಗಿ AI ತಂತ್ರಜ್ಞಾನವನ್ನು ಬಳಸಿಕೊಂಡು ವಾಟ್ಸಾಪ್‌ ಮೂಲಕ ಹಲವು ಸೇವೆಗಳನ್ನು ಒದಗಿಸಲು ಮುಂದಾಗಿದೆ. ಇದರಿಂದ ಸಾರ್ವಜನಿಕರು ಖಾತೆ, ಕಂದಾಯ ಕಟ್ಟಲು ಸೇರಿ ಇನ್ನಿತ್ತರ ಸೇವೆಗಾಗಿ ಪಾಲಿಕೆಗೆ ಅಲೆಯುವುದು ತಪ್ಪಿದೆ.

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತುಮಕೂರು ಮಹಾನಗರ ಪಾಲಿಕೆ AI ತಂತ್ರಜ್ಞಾನ ಬಳಸಿಕೊಂಡಿದ್ದು, ತುಮಕೂರಿನ ನಾಗರೀಕರು ವಾಟ್ಸಾಪ್ ಮೂಲಕ ಪಾಲಿಕೆ ಸೇವೆಗಳನ್ನು ಮನೆಯಲ್ಲೇ ಕೂತು ಪಡೆಯಬಹುದಾಗಿದೆ. ಈ ಹೊಸ ಸೇವೆಯ ಮೂಲಕ ನಗರ ಪಾಲಿಕೆ ತಮ್ಮ ವಿವಿಧ ಖಾತೆಗಳನ್ನು ಡಿಜಿಟಲೀಕರಣಗೊಳಿಸಿದೆ. ಪಾಲಿಕೆಯ ಅಧಿಕೃತ ವಾಟ್ಸಾಪ್ ಸಂಖ್ಯೆ ಮೂಲಕ ಎ ಖಾತೆ, ಬಿ ಖಾತೆ, ಇ ಆಸ್ತಿ ಸೇರಿ ಮುಂತಾದ ಸೇವೆಗಳನ್ನು ಮನೆಯಲ್ಲೇ ಕೂತು ಪಡೆಯಬಹುದಾಗಿದೆ, ಅಲ್ಲದೇ ಆಸ್ತಿ, ತೆರಿಗೆ ಪಾವತಿ, ನೀರು ಮತ್ತು ಯುಜಿಡಿ ಶುಲ್ಕ ಸೇರಿದಂತೆ ಹಲವು ಬಿಲ್‌ಗಳನ್ನು ವಾಟ್ಸಾಪ್‌ ಮೂಲಕ ಕಟ್ಟಬಹುದಾಗಿದ್ದು, ಬಿಲ್‌ ಪಾವತಿಯನ್ನು ಡೌನ್‌ಲೋಡ್‌ ಕೂಡ ಮಾಡಿಕೊಳ್ಳ ಬಹುದಾಗಿದೆ. 

ಈ ಹೊಸ ಆವಿಷ್ಕಾರದಿಂದಾಗಿ, ನಾಗರೀಕರು ಯಾವುದೇ ಸಮಯದಲ್ಲಾದರೂ ತಮ್ಮ ಬಿಲ್‌ಗಳನ್ನು ಪರಿಶೀಲಿಸಿ, ಪಾವತಿ ಮಾಡಬಹುದಾಗಿದೆ. ನಾಪತ್ತೆಯಾಗುವ ದಾಖಲೆಗಳ ಸಮಸ್ಯೆಯನ್ನು ಕೂಡ ಬಗೆಹರಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ಸೇವೆ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಕೆಲವೇ ಕ್ಷಣಗಳಲ್ಲಿ ಅಗತ್ಯ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಪಾಲಿಕೆಯಲ್ಲಿ AI ತಂತ್ರಜ್ಞಾನ ಅಳವಡಿಕೆಯಿಂದಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುತ್ತಾ ಸಮಯ ವ್ಯರ್ಥ ಆಗೋದನ್ನು ತಪ್ಪಿಸಬಹುದಾಗಿದೆ. ಜೊತೆಗೆ ಪಾಲಿಕೆಯಲ್ಲಿ ಬ್ರೋಕರ್‌ಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. 

ಒಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ AI ತಂತ್ರಜ್ಞಾನ ಬಳಕೆಯಿಂದ ಹೊಸ ಹೆಜ್ಜೆಯನ್ನಿಟ್ಟಿದ್ದು, ತುಮಕೂರಿಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇತರ ಮಹಾನಗರ ಪಾಲಿಕೆಗಳಿಗೂ ಮಾದರಿಯಾಗಲಿದೆ. ಪಾಲಿಕೆಯ ಈ ಹೊಸ ಸೇವೆಯನ್ನು ನಾಗರೀಕರು ಪ್ರಯೋಜನ ಪಡೆದುಕೊಂಡು ನಗರಾಭಿವೃದ್ಧಿಗೆ ಕೈಜೋಡಿಸಬೇಕಿದೆ.

 

Author:

...
Editor

ManyaSoft Admin

Ads in Post
share
No Reviews