ತುಮಕೂರು :
ಅಪ್ರಾಪ್ತೆ ಮಗಳನ್ನೇ ಗರ್ಭವತಿ ಮಾಡಿದ್ದ ಪಾಪಿಗೆ ತುಮಕೂರು ವಿಶೇಷ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ ಮಲತಂದೆಗೆ ಜೀವಾವಧಿ ಶಿಕ್ಷೆಯನ್ನು ನೀಡಿ ತುಮಕೂರು ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ತುಮಕೂರು ನಿವಾಸಿ ಖಮೀಲ್ ಪಾಷಾ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಜೀವಾವಧಿ ಶಿಕ್ಷೆ ಜೊತೆಗೆ 1 ಲಕ್ಷ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ನೊಂದ ಬಾಲಕಿಗೆ 11.50 ಲಕ್ಷ ಪರಿಹಾರ ನೀಡುವಂತೆಯೂ ಆದೇಶ ನೀಡಿದೆ.
12 ವರ್ಷದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮಲತಂದೆ ಖಮೀಲ್ ಪಾಷಾ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿ ಯನ್ನಾಗಿಸಿದ್ದ. ನೊಂದ ಬಾಲಕಿಯ ತಾಯಿ ೧೦ ವರ್ಷದ ಹಿಂದೆ ಖಮೀಲ್ ಪಾಷಾ ಎಂಬುವವನ ಜೊತೆ ಎರಡನೇ ಮದುವೆಯಾಗಿದ್ದರು. ಈ ಖಮೀಲ್ ಪಾಷಾ ಎಂಬಾತ ೧೨ ವರ್ಷದ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಜೊತೆಗೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದ. ಆದರೆ ಬಾಲಕಿ ಗರ್ಭವತಿ ಆಗ್ತಿದ್ದಂತೆ ತಾಯಿ ಖಮೀಲ್ ಪಾಷಾ ವಿರುದ್ಧ ದೂರು ದಾಖಲಿಸಿದ್ದರು.
ಡಿಸೆಂಬರ್ 6 2022ರಂದು ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಖಮೀಲ್ ಫಾಷಾ ಮೇಲೆ ಐಪಿಸಿ ಕಲಂ 376, ಐಪಿಸಿ 06 ಪೋಕ್ಸೋ ಆಕ್ಟ್ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಮಹಿಳಾ ಠಾಣಾ ಸಿ ಪಿ ಐ ನವೀನ ಕುಮಾರ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಮಹಿಳಾ ಪೋಲಿಸ್ ಠಾಣೆ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಆಶಾ ವಾದ ಮಂಡಿಸಿದ್ದರು.