CHIKKABALLAPURA : ಜನರಿಗೆ ಒಂದು ರೂಲ್ಸ್. ಅಧಿಕಾರಿಗಳಿಗೆ ಒಂದು ರೂಲ್ಸ್ ಅನ್ನುವಂತಾಗಿದೆ. ಕಾನೂನು ರಕ್ಷಣೆ ಮಾಡುವವರಿಂದಲೇ ಕಾನೂನು ಉಲ್ಲಂಘನೆ ಮಾಡ್ತಾರೆ ಅಂದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಆರ್ ಟಿ ಒ ಅಧಿಕಾರಿಗಳು ಅಂದರೆ ಅವರಿಗೆ ಹೇಳೋರು ಕೇಳೋರು ಯಾರು ಇಲ್ವಾ ಅನ್ನುವಂತಾಗಿದೆ. ಕಾನೂನು ರಕ್ಷಕರು ಇರೋದು ಕೇವಲ ಕಾನೂನು ಪಾಲನೆ ಬಗ್ಗೆ ಬೋದನೆ ಮಾಡಲು ಅಷ್ಟೇ ಪಾಲಿಸಲು ಅಲ್ಲ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ನಿರ್ದಶನವಾಗಿದೆ.
ಈ ಕಾರನ್ನು ಒಮ್ಮೆ ನೋಡಿಕೊಂಡು ಬಿಡಿ. KA 13 C 2732 ನೊಂದಣಿಯ ಮಹೀಂದ್ರಾ KUV ಕಾರು ಹಾಸನ ಆರ್‌ಟಿ ಒ ಕಚೇರಿಯಲ್ಲಿ ರಿಜಿಸ್ಟಾರ್ ಆಗಿದೆ. ಈ ಕಾರು ಪೂಜಾ ಜಿ.ಎಂ ಎಂಬ ಆರ್ ಟಿಒ ಅಧಿಕಾರಿಗೆ ಸೇರಿದ್ದಾಗಿದ್ದು, ಎಲ್ಲೋ ಬೋರ್ಡ್ ವಾಹನವಾಗಿದ್ದು, ವಾಣಿಜ್ಯ ವಾಹನ ಆಗಿರುತ್ತೆ, ಆದರೆ ಆರ್ ಟಿಒ ಇನ್ಸ್‌ಪೆಕ್ಟರ್ ಪೂಜಾ ಅವರು ಯೆಲ್ಲೋ ಬೋರ್ಡ್ ಕಾರಿಗೆ ವೈಟ್ ಬೋರ್ಡ್ ಹಾಕಿಕೊಂಡು ಓಡಿಸ್ತಾ ಇದ್ದಾರಂತೆ. ಈ ಕಾರಿನ ಕಥೆ ಇಷ್ಟಕ್ಕೆ ಮುಗಿದಿಲ್ಲ ಈ ಕಾರಿನ ಚರಿತ್ರೆ ಬಗೆದಷ್ಟು ಭಯಂಕರವಾಗಿದೆ.
ಚಿಂತಾಮಣಿ ಎಆರ್‌ಟಿಒ ಕಚೇರಿಯಲ್ಲಿ ಪೂಜಾ ಎಂಬುವರು ಮೋಟಾರ್ ವಾಹನ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಪೂಜಾ ಮೇಡಂ ಅವರಿಗೆ ಸೇರಿದ ಈ ಕಾರು, ಎಲ್ಲೋ ಬೋರ್ಡಿನಲ್ಲಿ ನೋಂದಣಿಯಾಗಿದ್ದರೂ ಬಿಳಿ ಬೋರ್ಡ್ ಹಾಕಿಕೊಂಡು ಓಡಿಸುತ್ತಿದ್ದಾರೆ. ಇಷ್ಟಕ್ಕೂ ಇವರು ಯಾರೋ ಗೃಹಿಣಿಯೂ ಅಲ್ಲ, ಕಾನೂನು ಗೊತ್ತಿಲ್ಲದವರೂ ಅಲ್ಲ, ಇವರು ಚಿಂತಾಮಣಿಯ ಆರ್‌ಟಿಓ ಬ್ರೇಕ್ ಇನ್ಸ್ಪೆಕ್ಟರ್ ಆಗಿದ್ದು, ಇವರದೇ ವಾಹನಕ್ಕೆ ಈ ರೀತಿ ಬೋರ್ಡಿನ ಬದಲಾವಣೆ ಮಾಡಲು ಯಾವ ಅಧಿಕಾರ ಇದೆ ಅಂತಾ ಗೊತ್ತಿಲ್ಲ. ಈ ಕಾರು 2017ರ ಅಕ್ಟೋಬರ್‌ನಲ್ಲಿ ಹಾಸನ ಆರ್‌ಟಿಒ ಕಚೇರಿಯಲ್ಲಿ ಹಳದಿ ಬೋರ್ಡಿನಲ್ಲಿ ನೋಂದಣಿಯಾಗಿದೆ. ಈ ವಾಹನದ ಫಿಟ್‌ನೆಸ್ ಅವಧಿ 2019ಕ್ಕೆ ಮುಗಿದಿದೆ. ಅಷ್ಟೇ ಯಾಕೆ ಟ್ಯಾಕ್ಸ್ ಅವಧಿ ಹಾಗೂ ಇನ್ಶುರೆನ್ಸ್ 2018ಕ್ಕೆ ಕ್ಲೋಸ್ ಆಗಿದೆ, ಹೀಗಿದ್ದರೂ ಕೂಡ ತಾನು ಆರ್ ಟಿಒ ಇನ್ಸ್‌ಪೆಕ್ಟರ್ ನನ್ನ ಯಾರು ಕೇಳ್ತಾರೆ ಅಂತಾ ರಾಜಾ ರೋಷವಾಗಿ ಕಾರನ್ನು ಓಡಾಡಿಸಿಕೊಂಡು ಇದ್ದಾರೆ.
ಇನ್ನು ಚಿಂತಾಮಣಿಯಲ್ಲಿ ಆರ್‌ಟಿಒ ಇನ್ಸ್ಪೆಕ್ಟರ್ ಆಗಿರುವ ಈ ಪೂಜಾ ಮೇಡಂ ಯಾವುದಾದರೂ ದಾಖಲೆ ಇಲ್ಲದ ಆಟೋ, ಬೈಕ್ ದಾರಿಯಲ್ಲಿ ಸಿಕ್ಕರೆ ಅವರಿಗೆ ಬೆಂಬಿಡದೇ ಕಾಡಿ, ದಂಡ ಹಾಕುವ ಪೂಜಾ ಮೇಡಂ ತಮ್ಮದೇ ವಾಹನಕ್ಕೆ ದಾಖಲೆಗಳು ಸತ್ತು ಹೋಗಿ ವರ್ಷಗಳೇ ಕಳೆದರೂ ಅವುಗಳನ್ನು ರಿನೀವಲ್ ಮಾಡಿಸಿಲ್ಲ. ಸುಮಾರು ನಾಲ್ಕೈದು ವರ್ಷಗಳಿಂದ ಫಿಟ್‌ನೆಸ್ ಇಲ್ಲದ ಕಾರನ್ನು ರಾಜಾರೋಷವಾಗಿ ಓಡಾಡ್ತಾ ಇದ್ದು, ಆರ್‌ಟಿಒ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ..? ಅಥವಾ ಅವರು ನಮ್ಮ ಡಿಪಾರ್ಟ್‌ಮೆಂಟ್‌ಗೆ ಸೇರಿದವರಾ ಅಂತಾ ರಾಜಿ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಸಾರಿಗೆ ಸಚಿವರು ಗಮನ ಹರಿಸಿ ವೈಟ್ ಬೋರ್ಡ್ ಆದ ಕಾರನ್ನು ಸೀಜ್ ಮಾಡಿ ಕ್ರಮ ಜರುಗಿಸಬೇಕಿದೆ.