Hunnudike : ಹೊನ್ನುಡಿಕೆ ಗ್ರಾ,ಪಂ ಬಿಜೆಪಿ ತೆಕ್ಕೆಗೆ | ಅಧ್ಯಕ್ಷರು,ಉಪಾಧ್ಯಕ್ಷರು ಅವಿರೋಧ ಆಯ್ಕೆ

HONNUDIKE : ಹೊನ್ನುಡಿಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ, ಅದ್ಯಕ್ಷರಾಗಿ ಗೀತಾ ಲಿಂಗರಾಜು ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಕೆಂಪರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 17 ಸದಸ್ಯರನ್ನು ಒಳಗೊಂಡಿದ್ದ ಹೊನ್ನುಡಿಕೆ ಗ್ರಾಮ ಪಂಚಾಯ್ತಿಯಲ್ಲಿ ತೆರವಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಗೀತಾ ಲಿಂಗರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪರಾಜು ಬಿಟ್ಟರೆ ಮತ್ಯಾರು ನಾಮಪತ್ರ ಸಲ್ಲಿಸಲಿರಲಿಲ್ಲ. ಅಧ್ಯಕ್ಷರಾಗಿ ಗೀತಾ ಲಿಂಗರಾಜು, ಉಪಾಧ್ಯಕ್ಷರಾಗಿ ಕೆಂಪರಾಜು ಅವರನ್ನು ಆಯ್ಕೆ ಮಾಡಿ ಚುನಾವಣಾಧಿಕಾರಿ ರಾಜೇಶ್ವರಿ ಘೋಷಿಸಿದ್ರು.

ಇನ್ನು ನೂತನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗ್ತಿದ್ದಂತೆ ಬೆಂಬಲಿಗರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ಗೀತಾ ಲಿಂಗರಾಜು, ಹೊನ್ನುಡಿಕೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆ. ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಹೊತ್ತು ನೀಡಿ ಯಾವುದೇ ಸಮಸ್ಯೆ ಬರದ ಹಾಗೆ ನಿರ್ವಹಣೆ ಮಾಡುತ್ತೇನೆಂದು ಭರವಸೆ ನೀಡಿದರು.

ಉಪಾಧ್ಯಕ್ಷ ಕೆಂಪರಾಜು ಮಾತನಾಡಿ, ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಮುಖಂಡರುಗಳಿಗೆ ಧನ್ಯವಾದಗಳು ತಿಳಿಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅನಿತಾಸಿದ್ದೇಗೌಡ ಮಾತನಾಡಿ. ಸತತ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಯಲ್ಲಿದ್ದು ಈಗಲೂ ಸಹ ಬಿಜೆಪಿ ಮಯವಾಗಿದೆ. ಶಾಸಕ ಸುರೇಶ್ ಗೌಡರ ಕಾರ್ಯ ಪ್ರವೃತ್ತಿಗೆ ಮೆಚ್ಚಿ ಜನಸಾಮಾನ್ಯರು ಅಧಿಕಾರ ನೀಡಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಇನ್ನು ಈ ವೇಳೆ  ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು , ಗ್ರಾಮಸ್ಥರು ಹಾಗೂ ಬೆಂಬಲಿಗರು ಹಾಜರಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಕೋರಿದರು.

Author:

...
Sushmitha N

Copy Editor

prajashakthi tv

share
No Reviews