CRICKET : ವಿವಾದದ ಸುಳಿಯಲ್ಲಿ ಶುಭ್ಮನ್ ಗಿಲ್

CRICKET NEWS :ಇಂಗ್ಲೆಂಡ್ ವಿರುದ್ಧದ ಬಹು ನಿರೀಕ್ಷಿತ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಜ್ಜಾಗಿದೆ. ಈ ಸರಣಿಯಲ್ಲಿ ನಾಯಕನಾಗಿ ಹೊಸ ಅಧ್ಯಾಯ ಆರಂಭಿಸೋಕೆ ಯುವತಾರೆ ಶುಭ್ಮನ್ ಗಿಲ್ ಸಜ್ಜಾಗಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಫೋಟೋಶೂಟ್‌ನಲ್ಲಿ ನಾಯಕ ಶುಭ್ಮನ್ ಗಿಲ್ ಸ್ಪೆಷಲ್ ಶೂಟ್ ಮಾಡಿದ್ದಾರೆ.

ಆದರೆ ಈ ಶೂಟ್ ಒಂದು ಟ್ಯಾಗ್‌ಲೈನ್ ಕಾರಣದಿಂದಾಗಿ ಇದೀಗ ವಿವಾಧದ ಕೇಂದ್ರಬಿಂದುವಾಗಿದೆ. ಗಿಲ್ ಹಿಡಿದಿದ್ದ ಬ್ಯಾಟ್‌ನಲ್ಲಿ 'PRINCE' ಅಡಿಬರಹವಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಕ್ರಿಕೆಟ್ ಲೋಕದಲ್ಲಿ ತಮ್ಮ ಗುರುತನ್ನು ಪೂರ್ತಿಯಾಗಿ ಸ್ಥಾಪಿಸಿಲ್ಲದ ಗಿಲ್, ಇಂಥ ಅಡಿಬರಹವಿರುವ ಬ್ಯಾಟ್ ಬಳಕೆ ಮಾಡಿರುವುದು ಸಚಿನ್ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಸುಲಭವಾಗಿ ಜೀರ್ಣವಾಗಿಲ್ಲ.

ಅಂದಿನ ದಂತಕಥೆಗಳಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ MRF ಬ್ಯಾಟ್ ಬಳಸಿದರೂ ಅಡಿಬರಹ ಇರಲಿಲ್ಲ. ಆದರೆ ಈಗ Gill ಬ್ಯಾಟ್‌ನಲ್ಲಿ  ‘PRINCE’ ಎಂಬ ಹೆಸರು ನೋಡಿ ನೆಟ್ಟಿಗರು ಕೆಂಡ ಕೋಪಗೊಂಡಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews