ತುಮಕೂರು:
ಪ್ರಜಾಶಕ್ತಿ ತುಮಕೂರಿನ ಮೂಲೆ ಮೂಲೆಯಲ್ಲಿಯು ಇರುವ ಸಮಸ್ಯೆಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾಲು ಸಾಲು ವರದಿ ಮಾಡಿ, ಗಮನ ಸೆಳೆಯುವ ಪ್ರಯತ್ನ ಮಾಡ್ತಾನೆ ಬಂದಿದೆ. ಸಣ್ಣ- ಸಣ್ಣ ಸಮಸ್ಯೆಗಳ ಸುದ್ದಿಯನ್ನು ಪ್ರಜಾಶಕ್ತಿ ಟೀಂ ಗಂಭೀರವಾಗಿ ಪರಿಗಣಿಸಿ, ವರದಿ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡ್ತಾ ಇದೆ. ಹೀಗಾಗಿ ಪ್ರಜಾಶಕ್ತಿ ತುಮಕೂರು ಜನರ ನಾಡಿಮಿಡಿತವಾಗಿದೆ ಅಂತಾನೇ ಹೇಳಲಾಗ್ತಿದೆ. ಇತ್ತ ಹೊನ್ನುಡಿಕೆ ಗ್ರಾಮದಲ್ಲಿ ಚರಂಡಿಯಲ್ಲಿಯೇ ಬೋರ್‌ವೆಲ್ ಇದ್ದು, ಚರಂಡಿ ಕಟ್ಟಿಕೊಂಡಿದ್ದು, ಬೋರ್‌ವೆಲ್ ನೀರು ಕಲುಷಿತವಾಗ್ತಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಹೊನ್ನುಡಿಕೆ ಜನರೇ ಹುಷಾರ್.. ನೀವು ಅಶುದ್ಧ ನೀರು ಕುಡಿಯುತ್ತಿದ್ದೀರಾ ಅನ್ನೋ ಶೀರ್ಷಿಕೆಯಡಿಯಲ್ಲಿ ವರದಿ ಮಾಡಿದ್ದು, ವರದಿ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ದೌಡಾಯಿಸಿ ಬೋರ್‌ವೆಲ್ ಇದ್ದ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ.
ಚರಂಡಿಯಲ್ಲಿ ಕಸ- ಕಡ್ಡಿ ತುಂಬಿಕೊಂಡು, ನೀರುಹೋಗದೇ ಕಟ್ಟಿಕೊಂಡಿತ್ತು. ಚರಂಡಿಯಿಂದ ಉತ್ಪತ್ತಿಯಾಗ್ತಿದ್ದ ಹುಳಗಳು ಕೇಬಲ್ ವೈರ್‌ನಿಂದ ಅಂತರ್ಜಲದ ನೀರಿಗೆ ಸೇರ್ತಾ ಇತ್ತು. ಅಲ್ಲದೇ ಅಂತರ್ಜಲದ ನೀರು ಕಲುಷಿತವಾಗ್ತಿತ್ತು. ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಮಾಡಿದ್ದು, ವರದಿ ಮಾಡ್ತಿದ್ದಂತೆ ಅಧಿಕಾರಿಗಳು ಓಡೋಡಿ ಬಂದು ಚರಂಡಿಯನ್ನು ಕ್ಲೀನ್ ಮಾಡಿಸಿದ್ದಾರೆ. ಅಲ್ಲದೇ ಬೋರ್‌ವೆಲ್‌ನ ನೀರನ್ನು ಸಂಗ್ರಹಿಸಿಕೊಂಡು ಲ್ಯಾಬ್‌ಗೆ ಟೆಸ್ಟ್‌ಗೆ ಕಳುಹಿಸಲಾಗಿದೆ.
ಸುಮಾರು ವರ್ಷದಿಂದ ಇದೇ ಬೋರ್‌ವೆಲ್‌ನಿಂದ ಇಡೀ ಗ್ರಾಮದ ಜನರಿಗೆ ನೀರು ಪೂರೈಕೆ ಆಗ್ತಾ ಇದ್ದು, ಕಲುಷಿತ ನೀರು ಪೂರೈಕೆ ಆಗ್ತಾ ಇದ್ದರು ಕ್ರಮ ಮಾತ್ರ ಆಗಿರಲಿಲ್ಲ. ಆದರೆ ಪ್ರಜಾಶಕ್ತಿ ವರದಿ ಆಗ್ತಿದ್ದಂತೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು ಪ್ರಜಾಶಕ್ತಿ ಟೀಂಗೆ ಜನರು ಅಭಿನಂದನೆ ಸಲ್ಲಿಸ್ತಾ ಇದ್ದಾರೆ.