Bangalore : ಫಿನಿಕ್ಸ್ ಚಿತ್ರೀಕರಣ ವೇಳೆ ಭಾರೀ ಅನಾಹುತ | ನಟ ಭಾಸ್ಕರ್ ಶೆಟ್ಟಿಗೆ ಗಾಯ

BANGALORE: ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಬೃಹತ್ ನಿರೀಕ್ಷೆಯ ಚಿತ್ರ 'ಫಿನಿಕ್ಸ್' (Phoenix) ಶೂಟಿಂಗ್ ಇದೀಗ ಅಂತಿಮ ಹಂತ ತಲುಪಿದ್ದು, ಚಿತ್ರೀಕರಣ ಬೆಂಗಳೂರಿನ ವಡೇರಹಳ್ಳಿಯಲ್ಲಿ ಸಕ್ರೀಯವಾಗಿ ನಡೆಯುತ್ತಿದೆ.

ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಭಾರೀ ಅನಾಹುತ ಸಂಭವಿಸಿದ್ದು, ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ನಟ ಭಾಸ್ಕರ್ ಶೆಟ್ಟಿ ಅವರ ಕಾಲಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ಧಾರಾಳವಾದ ಕ್ರಾಶ್ ಮತ್ತು ಫೈರ್ ಸನ್ನಿವೇಶದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದರೂ, ಸ್ಥಳದಲ್ಲಿದ್ದ ತಂಡದ ಸಮಯಪ್ರಜ್ಞೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅನಾಹುತ ಸಂಭವಿಸಿದ ತಕ್ಷಣವೇ ಭಾಸ್ಕರ್ ಶೆಟ್ಟಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ತೀವ್ರ ಗಾಯವಾಗದಿದ್ದರೂ ಕಾಲಿಗೆ ಪೆಟ್ಟಾಗಿದೆ ಎನ್ನಲಾಗ್ತಿದೆ. ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ನಿರ್ಮಾಪಕರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಕ್ರಮ ಕೈಗೊಂಡಿದ್ದಾರೆ. “ಶೂಟಿಂಗ್ ಸೆಟ್‌ನಲ್ಲಿ ಇರುವ ಪ್ರತಿಯೊಬ್ಬರ ಸುರಕ್ಷತೆ ನಮಗೆ ಮುಖ್ಯ. ಭಾಸ್ಕರ್ ಶೆಟ್ಟಿಗೆ ಶೀಘ್ರ ಆರೋಗ್ಯ ಲಭ್ಯವಾಗಲಿ ಎಂದು ಚಿತ್ರತಂಡ ಬೇಡಿಕೊಂಡಿದೆ. 

 

Author:

...
Sushmitha N

Copy Editor

prajashakthi tv

share
No Reviews