Newdelhi : 16ನೇ ಜನಗಣತಿ ಗೆಜೆಟ್ ಅಧಿಸೂಚನೆ ಬಿಡುಗಡೆ | 2026-27ರಲ್ಲಿ ಎರಡು ಹಂತಗಳಲ್ಲಿ ದೇಶದಾದ್ಯಂತ ಗಣತಿ

​​​​​NEWDELHI: ಬಹು ನಿರೀಕ್ಷಿತ 16ನೇ ಜನಗಣತಿ (Census 2026) ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ, ಜನಗಣತಿಯನ್ನು ಎರಡು ಹಂತಗಳಲ್ಲಿ ದೇಶಾದ್ಯಂತ ನಡೆಸಲಾಗುತ್ತದೆ. ಜೊತೆಗೆ, ಜಾತಿಗಣತಿ (Caste Census) ಕೂಡ ಈ ಸಲದ ಗಣತಿಯ ಭಾಗವಾಗಿರುವುದು ವಿಶೇಷ.

2026ರ ಅಕ್ಟೋಬರ್ 1ರಿಂದ ಮೊದಲ ಹಂತದ ಗಣತಿ ಕಾರ್ಯವು ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಹಿಮದಿಂದ ಆವೃತ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಇಡೀ ದೇಶದ ಉಳಿದ ಭಾಗಗಳಲ್ಲಿ ಜನಗಣತಿ ಹಾಗೂ ಜಾತಿಗಣತಿ ಕಾರ್ಯವು 2027ರ ಮಾರ್ಚ್ 1ರಿಂದ ಆರಂಭವಾಗಲಿದೆ.

ಇನ್ನು ಅಧಿಸೂಚನೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ಭಾನುವಾರ (ಜೂ.15) ಜನಗಣತಿ ನಡೆಸುವ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಪ್ರಧಾನ ಕಾರ್ಯದರ್ಶಿ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು

ಜನಗಣತಿ ಕಾರ್ಯವು ರಾಷ್ಟ್ರದ ಅಭಿವೃದ್ಧಿಗೆ ನಿರ್ಣಾಯಕವಾದ ಡೇಟಾ ಒದಗಿಸುವ ಮೂಲಕ, ಸರ್ಕಾರಿ ಯೋಜನೆಗಳು, ಉಪಯುಕ್ತತೆ, ಜನಸಂಖ್ಯಾ ಹಿತಾಸಕ್ತಿ ಹಾಗೂ ಸಾಮಾಜಿಕ ನ್ಯಾಯದ ಕಡೆಗೆ ದಾರಿತೋರುವ ಮಹತ್ವದ ಪ್ರಕ್ರಿಯೆಯಾಗಲಿದೆ. ಈ ಬಗ್ಗೆ ಭಾರತ ಸರ್ಕಾರದ ಗೃಹ ಸಚಿವಾಲಯವು ನೀಡಿರುವ ಅಧಿಸೂಚನೆ ಅನ್ವಯ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕಾಲದಲ್ಲಿ ಕಾರ್ಯಾರಂಭಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

Author:

...
Sushmitha N

Copy Editor

prajashakthi tv

share
No Reviews