ತುಮಕೂರು : ಬೆಲೆ ಏರಿಕೆ ವಿರುದ್ಧ ಸ್ಲಂ ಜನಾಂದೋಲನ ಸಂಘಟನೆ ಆಕ್ರೋಶ

ತುಮಕೂರು :

ರಾಜ್ಯ ಸರ್ಕಾರ ಏಪ್ರಿಲ್‌ 1 ರಿಂದ ಹಾಲು, ಮೊಸರು, ಕರೆಂಟ್‌ ಸೇರಿ ಹಲವು ಬೆಲೆಗಳನ್ನು ಏರಿಕೆ ಮಾಡಿದ್ದು, ಕೈ ಸರ್ಕಾರದ ವಿರುದ್ಧ ವಿಪಕ್ಷಗಳು ಸೇರಿ ಸಾಮಾನ್ಯ ಜನರು ಬೀದಿಗಿಳಿದು ಆಕ್ರೋಶ ಹೊರಹಾಕ್ತಿದ್ದಾರೆ. ಇಂದು ತುಮಕೂರಿನಲ್ಲಿ ಬೆಲೆ ಏರಿಕೆ ವಿರುದ್ಧ ಸ್ಲಂ ಜನಾಂದೋಲನ ಸಂಘಟನೆ ಪ್ರತಿಭಟನೆ ನಡೆಸಿದ ಆಕ್ರೋಶ ಹೊರಹಾಕಿದರು.

ನಗರದ ಡಿಸಿ ಕಚೇರಿ ಮುಂಭಾಗ ನೂರಾರು ಮಂದಿ ಸ್ಲಂ ಜನಾಂದೋಲನ ಸಂಘಟನೆ ಮುಖಂಡರು ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು. ಬೆಲೆ ಏರಿಕೆ ನಿಲ್ಲಿಸಿ, ಬಡವರನ್ನು ಉಳಿಸಿ ಎಂದು ಪೋಸ್ಟರ್‌ಗಳನ್ನು ಹಿಡಿದು ಮುಖಂಡರು ಪ್ರತಿಭಟನೆ ನಡೆಸಿದರು. ನಿತ್ಯ ಬಳಕೆಗೆ ವಸ್ತುಗಳಾದ ಹಾಲು, ಮೊಸರು, ಪೆಟ್ರೋಲ್‌ ಡಿಸೇಲ್‌ ಅಡುಗೆ ಅನಿಲ ಸೇರಿ ಹಲವು ಬೆಲೆಗಳು ಏರಿಕೆಯಿಂದಾಗಿ ಬಡವರ್ಗದ ಜನರ ಜೀವನ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಇನ್ನು ಬಡವರನ್ನು ನೋಡೊಕೆ ಸರ್ಕಾರಕ್ಕೆ ಸಮಯವಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಬೆಲೆ ಏರಿಕೆಗೆ ತಕ್ಷಣ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.

Author:

...
Ohileshwari K.M

Bulletin producer

prajashakthi tv

share
No Reviews