ತುಮಕೂರು :
ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ ಕೊಡಿಸುವ ಕೆಲಸ ಮಾಡ್ತಿದೆ. ಇದೀಗ ನಿಮ್ಮ ಪ್ರಜಾಶಕ್ತಿ ಟಿವಿ ಮಾಡಿದ್ದ ಮತ್ತೊಂದು ವರದಿಗೆ ಮತ್ತೊಂದು ಫಲಶೃತಿ ಸಿಕ್ಕಿದೆ.
ತುಮಕೂರಿನ ರಿಂಗ್ ರಸ್ತೆಯಿಂದ ಎಸ್ ಎಸ್ ಐ ಟಿ ಕಾಲೇಜು ಕಡೆ ಹೋಗುವ ರಸ್ತೆಯ ಸದಾಶಿವನಗರದ ಎರಡನೇ ಹಂತದ ರಸ್ತೆ ಬದಿ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗಿತ್ತು. ಜೊತೆಗೆ ಚರಂಡಿ ಓಪನ್ ಆಗಿದ್ದು ಕೊಳಚೆ ನೀರು ಉಕ್ಕಿ ಹರಿಯುತ್ತಿತ್ತು. ಕಸ ಮತ್ತು ಕೊಳಚೆ ನೀರಿನಿಂದಾಗಿ ಇಡೀ ಏರಿಯಾ ದುರ್ನಾಥ ಬೀರುತ್ತಿದೆ. ಮತ್ತೊಂದೆಡೆ ಕುಡಿಯುವ ನೀರಿನ ಪೈಪ್ ಕೂಡ ಒಡೆದುಹೋಗಿದ್ದು, ಕುಡಿಯುವ ನೀರೊಂದಿಗೆ ಕೊಳಚೆ ನೀರು ಸೇರುವ ಆತಂಕದಲ್ಲಿ ಸಾರ್ವಜನಿಕರಿದ್ದರು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ರಿಂಗ್ ರಸ್ತೆ ಪಕ್ಕದಲ್ಲಿ ಅಂತರ್ಜಲದಂತೆ ಉಕ್ಕಿ ಹರಿಯುತ್ತಿದೆ ಕೊಳಚೆ ನೀರು ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಬಿತ್ತರಿಸಿತ್ತು. ಈ ಸುದ್ದಿ ಬಿತ್ತರಿಸಿದ ಎರಡೇ ದಿನದಲ್ಲಿ ತುಮಕೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಪಾಲಿಕೆ ಸಿಬ್ಬಂದಿ ನೀರು ಹರಿಯುತ್ತಿದ್ದ ಸ್ಥಳಕ್ಕೆ ಮಣ್ಣು ಹಾಕಿಸಿ, ನೀರು ಪೋಲಾಗುತ್ತಿದ್ದ ಸಮಸೈಗೆ ಕಡಿವಾಣ ಹಾಕಿದೆ.
ಒಟ್ಟಿನಲ್ಲಿ ಸುದ್ದಿ ಮಾಡಿದ ನಂತರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಇನ್ನು ಮುಂದಾದರೂ ಈ ರೀತಿ ವ್ಯವಸ್ಥೆ ಆಗದಂತೆ ನೋಡಿಕೊಳ್ಳಲಿ ಎಂಬುದು ನಿಮ್ಮ ಪ್ರಜಾಶಕ್ತಿ ಟಿವಿಯ ಕಳಕಳಿ.