ಕೊರಟಗೆರೆ : ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

ಕೊರಟಗೆರೆ ಪೊಲೀಸ್‌ ಠಾಣೆ
ಕೊರಟಗೆರೆ ಪೊಲೀಸ್‌ ಠಾಣೆ
ತುಮಕೂರು

ಕೊರಟಗೆರೆ :

ದ್ವಿಚಕ್ರ ವಾಹನಕ್ಕೆ ಟಾಟಾ ಏಸ್‌ ವಾಹನ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊರಟಗೆರೆ ತಾಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರಗನಹಳ್ಳಿ ಬಳಿ ಈ ಘಟನೆ ನಡೆದಿದೆ. ಬೆಂಗಳೂರಿನ ಹೆಸರಘಟ್ಟ ಮೂಲದ 44 ವರ್ಷದ ಸತೀಶ್‌ ಕುಮಾರ್‌ ಮೃತ ದುರ್ದೈವಿಯಾಗಿದ್ದಾರೆ.

ನಾಗೇನಹಳ್ಳಿ ಕಡೆಯಿಂದ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಗೊರವನಹಳ್ಳಿ ಕಡೆಯಿಂದ ಬರ್ತಿದ್ದ ಟಾಟಾ ಏಸ್‌ ವಾಹನ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಯುಗಾದಿ ಹಬ್ಬಕ್ಕೆಂದು ಕೋಳಾಲ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗ್ತಿದೆ.

ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸ್‌ ಠಾಣೆ ಸಬ್‌ ಇನ್ಸ್‌ ಪೆಕ್ಟರ್‌ ಚೇತನ್‌ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ಈ ಸಂಬಂಧ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Editor

ManyaSoft Admin

share
No Reviews