ತಿಪಟೂರು:
ರಾಜ್ಯದ್ಯಂತ ಇಂದು ಮತ್ತು ನಾಳೆ ಸಿಇಟಿ ಎಕ್ಸಾಮ್ ನಡೆಯುತ್ತಿದ್ದು, ತಿಪಟೂರಿನ ಪ್ರಥಮ ದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಸೆಂಟರ್ಗಳ ಮುಂದೆ ಜಮಾಯಿಸಿದ್ದರು. ಕಾಲೇಜು ಮುಂಭಾಗವಂತೂ ಜನವೋ ಜನ. ಕೈಯಲ್ಲಿ ಹಾಲ್ ಟಿಕೆಟ್ ಹಿಡಿದು ವಿದ್ಯಾರ್ಥಿಗಳು ಓಡಾಡ್ತಾ ಇದ್ದರೆ ಪೋಷಕರು ಗಾಬರಿಯಲ್ಲಿ ಮಕ್ಕಳನ್ನು ಕರೆದುಕೊಂಡು ಬಂದು ಎಕ್ಸಾಮ್‌ಗೆ ಬಿಟ್ಟರು.
ಇನ್ನು ರಾಜ್ಯಾದ್ಯಂತ 775 ಕೇಂದ್ರಗಳಲ್ಲಿ 3.31 ಲಕ್ಷವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದೇ ಮೊದಲ ಬಾರಿಗೆ ವೆಬ್ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ೧೦.೩೦ಕ್ಕೆ CETಎಕ್ಸಾಮ್ಇದ್ರೆ, ಪರೀಕ್ಷಾರ್ಥಿಗಳು ಹಾಗೂ ಪೋಷಕರು ೮ ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳ ಮುಂದೆ ಜಮಾಯಿಸಲು ಶುರುಮಾಡಿದ್ರು. ಇನ್ನು ಪರೀಕ್ಷಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಬಂದ ಗುಂಪುಗಳನ್ನು ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ಸಂಭಾಳಿಸಿ ಎಕ್ಸಾಮ್ ಸೆಂಟರ್ಗಳಿಗೆ ಕಳಿಸಿದರು.
ಲಕ್ಷಾಂತರ ವಿದ್ಯಾರ್ಥಿಗಳು ಕನಸು ಕಟ್ಟಿಕೊಂಡು ಹಗಲು, ಇರುಳು ಎನ್ನದೆ ಓದಿ ಇಂದು ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದ್ದು, ಎಲ್ಲರಿಗೂ ಕೂಡ ಒಳಿತಾಗಲಿ, ಒಳ್ಳೆಯ ಅಂಕಗಳುಸಿಗಲಿ. ಪರೀಕ್ಷೆ ಎನ್ನುವುದು ಜೀವನದಲ್ಲಿ ಒಂದು ಭಾಗವಷ್ಟೇ ಪರೀಕ್ಷೆಯೇ ಜೀವನವಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರಲಿ, ಬರದಿರಲಿ ವಿದ್ಯಾರ್ಥಿಗಳು ನೋವುಂಟು ಮಾಡಿಕೊಳ್ಳದೆ ಜೀವನದಲ್ಲಿ ಯಶಸ್ಸು ಕಾಣಲಿ ಎನ್ನುವುದು ಪ್ರಜಾಶಕ್ತಿ ಟಿವಿ ಆಶಯ ಕೂಡ ಹೌದು.