ಕುಣಿಗಲ್‌ : ಸದ್ದಿಲ್ಲದೇ ಬಂದು ಬೈಕ್ ಎಗರಿಸಿದ ಖತರ್ನಾಕ್ ಕಳ್ಳ ..!

ಕಳ್ಳ ಬೈಕ್‌ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳ್ಳ ಬೈಕ್‌ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತುಮಕೂರು

ಕುಣಿಗಲ್:‌ 

ಕುಣಿಗಲ್‌ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಮನೆ ಮುಂದಿದ್ದ ಬೈಕ್‌ಗಳನ್ನು ರಾತ್ರೋ ರಾತ್ರಿ ಬೈಕ್‌ ಎಗರಿಸುತ್ತಿದ್ದ ಕಳ್ಳರು ಈಗ ಹಾಡಹಗಲೇ ಕಳ್ಳತನಕ್ಕೆ ಇಳಿದಿದ್ದು, ಕುಣಿಗಲ್‌ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕುಣಿಗಲ್‌ ಪಟ್ಟಣದ ಶಿಕ್ಷಕರ ಭವನದ ಎದುರು ಇದ್ದ ಬಟ್ಟೆ ಅಂಗಡಿ ಮುಂದೆ ನಿಂತಿದ್ದ ಬೈಕ್‌ನ ಕಳ್ಳನೋರ್ವನು ಬೈಕ್‌ ಎಗರಿಸಿ ಪರಾರಿಯಾಗಿದ್ದಾನೆ.

ಕುಣಿಗಲ್‌ ಪಟ್ಟಣದ ಶಿಕ್ಷಕರ ಭವನದ ಮುಂದೆ ಇರೋ ಬಟ್ಟೆ ಅಂಗಡಿ ಮುಂದಿದ್ದ ಬೈಕ್‌ನನ್ನು ಕಳ್ಳತನ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬಟ್ಟೆಕೊಳ್ಳಲೆಂದು ಅಪ್ಪ- ಮಗಳು ಬಂದಿದ್ದರು. ಈ ವೇಳೆ ಬೈಕ್‌ ಸವಾರ ಬೈಕ್‌ ಕೀಯನ್ನು ಬೈಕ್‌ನಲ್ಲೇ ಬಿಟ್ಟು ಬಟ್ಟೆ ಅಂಗಡಿ ಒಳಗೆ ಹೋಗಿದ್ದಾರೆ ಅಷ್ಟೇ. ಇದನ್ನು ಅಲ್ಲಿಯೇ ಇದ್ದ ಕಳ್ಳ ನೋಡಿ ಏಕಾಏಕಿ ಬಂದು ಬೈಕ್‌ ಎಗರಿಸಿಕೊಂಡು ಹೋಗಿದ್ದಾನೆ, ಸದ್ಯ ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಬೈಕ್‌ ಕಳ್ಳತನದ ದೃಶ್ಯ ಸೆರೆಯಾಗಿದ್ದು ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Author:

...
Editor

ManyaSoft Admin

share
No Reviews