ಚಿಕ್ಕಬಳ್ಳಾಪುರ :
ಯುಗಾದಿ ಹಬ್ಬ ಬಂತೆಂದರೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಜೂಜಾಟದ ಜೊತೆಗೆ ಕೋಳಿ ಪಂದ್ಯಗಳು ಗ್ರಾಮಗಳಲ್ಲಿ ಜೋರಾಗಿಯೇ ನಡೆಯುತ್ತವೆ. ಅಂದರ್ ಬಾಹರ್ ಆಡದಂತೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದರು ಕೂಡ ಡೋಂಟ್‌ಕೇರ್ ಅನ್ನದೇ ಜನರು ತೆರೆಮೆರೆಯಲ್ಲಿ ಕೋಳಿ ಪಂದ್ಯ ಹಾಗೂ ಜೂಜಾಟಗಳು ನಡೆಸ್ತಾನೆ ಇದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಜೂಜುಕೋರರಿಗೆ ಚಳಿ ಬಿಡಿಸಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಬರೋಬ್ಬರಿ 293 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಇಸ್ಪೀಟ್ ಹಾಗೂ ಕೋಳಿ ಪಂದ್ಯಗಳನ್ನು ಆಡ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ಏಕಾಏಕಿ ರೇಡ್ ಮಾಡಿದ್ದಾರೆ. ಜೂಜಾಟ ಸಂಬಂಧ 48 ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದು, 293 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ಅಲ್ಲದೇ ಒಂದೇ ದಿನದಲ್ಲಿ ಬರೋಬ್ಬರಿ 2 ಲಕ್ಷದ 40 ಸಾವಿರದ ನಗದು ಹಣವನ್ನು ಸೀಜ್ ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.