ದೊಡ್ಡಬಳ್ಳಾಪುರ :
ಬೇಸಿಗೆ ಶುರುವಾಗಿದ್ದು ಬೆಂಕಿ ದುರಂತಗಳು ಸಂಭವಿಸುತ್ತಿದ್ದು, ಬೆಂಕಿ ಅವಘಡಗಳನ್ನು ನಿಯಂತ್ರಿಸುವುದೇ ಅಗ್ನಿಶಾಮಕ ಸಿಬ್ಬಂದಿಗೆ ಹರಸಾಹಸದ ಕೆಲಸವಾಗಿದೆ, ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರು ಕೂಡ ಅಲ್ಲಲ್ಲಿ ಅಗ್ನಿ ಅವಘಡಗಳು ನಡೆಯುತ್ತಲೇ ಇವೆ. ಹೌದು ದೊಡ್ಡಬಳ್ಳಾಪುರ ನಗರ ಡಿ ಕ್ರಾಸ್ ಬಳಿ ಇರೋ ಪೊಲೀಸ್ ಠಾಣೆ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆಗೆ ಸೀಜ್ ಆಗಿದ್ದ ಕಾರು ಸುಟ್ಟು ಭಸ್ಮವಾಗಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಸಮೀಪದ ಟ್ರಾನ್ಸ್‌ಫಾರ್ಮರ್ ಬಳಿ ಹುಲ್ಲು ಒಣಗಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ, ಬೆಂಕಿಯ ಕೆನ್ನಾಲಗೆಗೆ ಅಕ್ಕ- ಪಕ್ಕಕ್ಕೆ ವ್ಯಾಪಿಸಿದ್ದು, ಗಿಡ- ಮರಗಳು ಧಗಧಗನೆ ಹೊತ್ತಿ ಉರಿದಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ, ಅಲ್ಲದೇ ಅಪರಾಧ ಪ್ರಕರಣದಲ್ಲಿ ಸೀಜ್ ಆಗಿದ್ದ ಕಾರೊಂದು ಸುಟ್ಟು ಕರಕಲಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ ಬೆಂಕಿಗೆ ಕಾರು ಹಾಗೂ ಗಿಡ- ಮರಗಳು ನಾಶವಾಗಿವೆ.