ಸಿನಿಮಾ : ಕರ್ನಾಟಕದ ಜನಪ್ರಿಯ ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಹಿರಿಯ ಮಗಳು ಧೃತಿ ಪುನೀತ್ ರಾಜ್ಕುಮಾರ್ ತಮ್ಮ ವಿದ್ಯಾಭ್ಯಾಸದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕದ ಪ್ರಸಿದ್ಧ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ನಿಂದ ಧೃತಿ ಅವರು ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದು ಹೊರ ಬಂದಿದ್ದಾರೆ. 2021ರಲ್ಲಿ ಅಧ್ಯಯನವನ್ನು ಪ್ರಾರಂಭಿಸಿದ ಅವರು, ನಾಲ್ಕು ವರ್ಷಗಳ ನಿರಂತರ ಪರಿಶ್ರಮದ ನಂತರ ಈ ಸಾಧನೆಯನ್ನು ಪೂರೈಸಿದ್ದಾರೆ.
ಧೃತಿಯ ಈ ವಿಶೇಷ ಸಾಧನೆಗೆ ಸಾಕ್ಷಿಯಾಗಲು ಅವರ ತಾಯಿ ಅಶ್ವಿನಿ ಪುನೀತ್ ರಾಜ್ಕುಮಾರ್, ತಮ್ಮ ಅಣ್ಣ ವಿನಯ್ ರಾಜ್‌ಕುಮಾರ್ ಹಾಗೂ ತಮ್ಮ ಅಕ್ಕ ವಂದಿತಾ ಪುನೀತ್ ರಾಜ್ಕುಮಾರ್ ಅವರು ನ್ಯೂಯಾರ್ಕ್‌ನಲ್ಲಿ ಹಾಜರಿದ್ದರು. ಪದವಿ ಪ್ರದಾನ ಸಮಾರಂಭದಲ್ಲಿ ಧೃತಿ ನುಡಿಯೇ ಇಲ್ಲದ ಅನುಭವವನ್ನು ತಾಯಿಯ ಇನ್ನು ಮಗಳು ಪದವಿ ಪಡೆದು ಹೊರಗಡೆ ಬರುತ್ತಿದ್ದಂತೆ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಂಗ್ಯಾಜ್ಯುಲೇಶನ್ಸ್ ಎಂದು ಕೂಗಿದ್ದಾರೆ.
ಧೃತಿ ಅವರು ತಮ್ಮ ಬೌದ್ಧಿಕತೆ, ವಿನಯ ಹಾಗೂ ಕಲಾತ್ಮಕ ದೃಷ್ಟಿಕೋನದಿಂದ ಆಗಲೇ ಕುಟುಂಬದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನಲ್ಲಿ ಓದುದು, ಧೃತಿ ಅವರು ಕ್ರಿಯೇಟಿವ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮಾಡಿಕೊಳ್ಳಲು ತಯಾರಾಗುತ್ತಿದ್ದಾರೆ. ಧೃತಿಯ ಈ ಸಾಧನೆಗೆ ಚಿತ್ರರಂಗ, ಅಭಿಮಾನಿಗಳು, ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ಶುಭಾಶಯಗಳನ್ನು ತಿಳಿಸಿದ್ದಾರೆ.