ತುಮಕೂರು : ತುಮಕೂರಿನಲ್ಲಿ ಸಚಿವ ಸೋಮಣ್ಣ ಫುಲ್‌ ಆಕ್ಟಿವ್‌

ತುಮಕೂರು : ಕೇಂದ್ರ ರೈಲ್ವೆ ಸಚಿವರಾದ ಬಳಿಕ ತುಮಕೂರಿನಲ್ಲಿ ವಿ ಸೋಮಣ್ಣ ಫುಲ್‌ ಆಕ್ಟಿವ್‌ ಆಗಿದ್ದಾರೆ. ಕಳೆದ ತಿಂಗಳು ತುಮಕೂರು ಜಿಲ್ಲೆಯ 8 ಕಡೆಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ, ರೈಲ್ವೆ ಕ್ರಾಸಿಂಗ್‌ನಿಂದ ಜನರಿಗೆ ಆಗ್ತಿದ್ದ ಕಿರಿಕಿರಿಯನ್ನು ತಪ್ಪಿಸುವ ಕೆಲಸ ಮಾಡಿದ್ರು. ಅಲ್ದೇ ನಾನಾ ರೈಲ್ವೆ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಗುದ್ದಲಿ ಪೂಜೆಯನ್ನು ನೆರವೇರಿಸಿದ್ರು. ಇಂದು ತುಮಕೂರು ಜಿಲ್ಲಾ ಪ್ರವಾಸದಲ್ಲಿರೋ ಕೇಂದ್ರ ರೈಲ್ವೆ ಸಚಿವ ಸೋಮಣ್ಣ ತುಮಕೂರು ಟು ದಾವಣಗೆರೆ ರೈಲ್ವೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ರು.

ತುಮಕೂರು ಹೊರವಲಯದ ತಿಮ್ಮರಾಜನಹಳ್ಳಿಯಲ್ಲಿ ನಡೆಯುತ್ತಿರೋ ರೈಲ್ವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ್ರು. ಈ ವೇಳೆ ಸೋಮಣ್ಣಗೆ ಶಾಸಕ ಜ್ಯೋತಿ ಗಣೇಶ್‌, ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಸಾಥ್‌ ನೀಡಿದ್ರು. ಈ ವೇಳೆ ಅಧಿಕಾರಿಗಳಿಗೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸುವಂತೆ ಸೋಮಣ್ಣ ಸೂಚನೆ ನೀಡಿದ್ರು. ಈ ವೇಳೆ ಮಾತನಾಡಿದ ಸೋಮಣ್ಣ, ತುಮಕೂರಿನಲ್ಲಿ ಬೆಂಗಳೂರು ಚೆನೈ ಕಾರಿಡಾರ್ ಯೋಜನೆಯನ್ನು ಪಿಎಂ ಗತಿಶಕ್ತಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗ್ತಿದೆ. ಇದ್ರಿಂದ 88 ಸಾವಿರದ 500 ಜನಕ್ಕೆ ಉದ್ಯೋಗ ಸೃಷ್ಟಿಯಾಗುತ್ತ ಎಂದು ಭರವಸೆ ನೀಡಿದ್ರು.

ಇನ್ನು ಈ ವೇಳೆ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೀನಿ ಅಂತಾ ಸೋಮಣ್ಣ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮೋದಿ ಜಿ ಹಣದ ಕೇಳೊಲ್ಲ.. ಅಭಿವೃದ್ದಿ ಬಗ್ಗೆ ಮಾತ್ರ ಕೇಳುತ್ತಾರೆ. ಹೀಗಾಗಿ ನಾನು ಸಿದ್ಧರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಒಟ್ನಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವರಾದ ಬಳಿಕ ಸೋಮಣ್ಣ ಕ್ಷೇತ್ರದಲ್ಲಿ ನಿರಂತರವಾಗಿ ಸಂಚಾರ ಮಾಡ್ತಾ ಇದ್ದಾರೆ. ಅಲ್ದೇ ತುಮಕೂರಿನಲ್ಲಿ ನಾನಾ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದು ಕ್ಷೇತ್ರದ ಮತದಾರರು ಸಂತಸ ವ್ಯಕ್ತಪಡಿಸ್ತಾ ಇದ್ದಾರೆ.

Author:

...
Keerthana J

Copy Editor

prajashakthi tv

share
No Reviews