ಪಾವಗಡ : ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರಕ್ಕೆ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯ ದಿನಾಂಕವನ್ನು ಮೇ25ರ ವರೆಗೂ ವಿಸ್ತರಿಸಿದೆ. ಛಲವಾದಿ ಕುಲಬಾಂಧವರ ಮನೆಗಳ ಬಳಿ ಗಣತಿದಾರರು ಬಂದಾಗ ತಮ್ಮ ಜಾತಿ ಛಲವಾದಿ ಎಂದು ನಮೂದಿಸಿ ಎಂದು ಛಲವಾದಿ ಸಮುದಾಯದ ಜಿಲ್ಲಾಧ್ಯಕ್ಷ ಭಾನುಪ್ರಕಾಶ್ ತಿಳಿಸಿದ್ರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ನೀವು ಛಲವಾದಿ ಎಂದು ನೋಂದಾಯಿಸದಿದ್ದರೆ ಭವಿಷ್ಯದ ಪೀಳಿಗೆಗೆ ಮೀಸಲಾತಿಯ ವಿಚಾರದಲ್ಲಿ ಅನ್ಯಾಯವಾಗುವ ಸಂಭವವಿರುತ್ತದೆ ಎಂದರು.
ಇನ್ನು ಈ ವೇಳೆ ಮುಖಂಡರುಗಳು ಮಾಡನಾಡಿ ಗ್ರಾಮೀಣ ಭಾಗಗಳಲ್ಲಿನ ಛಲವಾದಿ ಸಮುದಾಯದ ಯುವಕರು ಜನರಲ್ಲಿ ಜಾಗೃತಿ ಮೂಡಿಸುತ್ತ ಸಮುದಾಯದವರ ನೋಂದಣಿಗೆ ಮುಂದಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಆದಿನಾರಾಯಣ, ಡಿ ರಾಜೇಂದ್ರ. ಚಿರಂಜೀವಿ ಸೇರಿದಂತೆ ಮತ್ತಿತರರು ಹಾಜರಿದ್ದರು.