ತುಮಕೂರು:
ಮಳೆ ಚಳಿ ಗಾಳಿ ಎನ್ನದೆ ಸತತ 13 ದಿನದಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ವತಿಯಿಂದ ಭೂಮಿ ಮತ್ತು ನಿವೇಶನ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಸ್ಥಳಕ್ಕೆ ಡಿಸಿ,ಎಸಿ, ಎಸ್‌ಪಿ ಭೇಟಿ ಕೋಟ್ರು ಕೂಡ ಜಗ್ಗದ, ಯಾರ ಮಾತಿಗೂ ಸ್ಪಂದಿಸದ ಹೋರಾಟಗಾರರು ಬೇಡಿಕೆ ಈಡೇರಿಸೋವರೆಗೆ ನಮ್ಮ ಹೋರಾಟ ನಿಲ್ಲಿಸೊಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಪ್ರತಿಭಟನೆ ಪ್ರಾರಂಭ ಮಾಡಿ ಇಂದಿಗೆ 13 ದಿನಗಳು ಸಂದಿವೆ. ಆದ್ರೆ ಅಧಿಕಾರಿಗಳು ಬರ್ತಾರೆ ಹೋಗ್ತಾರೆ ನಮ್ಮ ಬೇಡಿಕೆಯನ್ನು ಈಡೇರಿಸುವ ಮಾತನ್ನ ಮಾತ್ರ ಕೊಡ್ತಿಲ್ಲ ಅಂತ ಹೀಗಾಗಿ ನಮ್ಗೆ ಸ್ಥಳದಲ್ಲಿಯೇ ನ್ಯಾಯ ಕೊಡಬೇಕು ಅಂತ ಆಗ್ರಹಿಸುತ್ತಿದ್ದಾರೆ.
ಹೌದು, ಕೊರಟಗೆರೆ, ಮಧುಗಿರಿ, ಶಿರಾದಲ್ಲಿ ವಾಸಿಸುವ ನಿವೇಶನ ರಹಿತರಿಗೆ ನಿವೇಶನ, ಹಕ್ಕುಪತ್ರ ನೀಡಬೇಕು ಎಂದು ತುಮಕೂರಿನ ಡಿಸಿ ಕಚೇರಿ ಎದ್ರು ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ವತಿಯಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸ್ಥಳದಲ್ಲಿಯೇ ಮಕ್ಕಳು ಮರಿ ಎನ್ನದೆ, ಅಲ್ಲಿಯೇ ಊಟ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಬಾರಿಯು ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಹೋಗ್ತಿದ್ದಾರೆ. ಆದ್ರೆ ಅಧಿಕಾರಿಗಳ ಆಶ್ವಾಸನೆಗೆ ಹೋರಾಟಗಾರರು ಸೊಪ್ಪು ಹಾಕ್ತಿಲ್ಲ. ಬದಲಿಗೆ ನಮ್ಗೆ ಭೂಮಿ ಮತ್ತು ನಿವೇಶಕ್ಕೆ ಈಗಾಗಲೇ ಆದೇಶವಾಗಿದೆ. ಆದ್ರೆ ಇದುವರೆಗೂ ಯಾರು ಕೂಡ ಆದೇಶದಂತೆ ನಮ್ಗೆ ನಿವೇಶನ, ಹಕ್ಕು ಪತ್ರ ನೀಡ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡ್ತಾ ಇದೀವಿ. ನಮ್ಗೆ ಆಶ್ವಾಸನೆ ಬೇಡ ನಾವು ಕುಂತಿರುವ ಸ್ಥಳದಲ್ಲಿಯೇ ಸರ್ಕಾರ ಹೊರಡಿಸಿರುವ ಆದೇಶದಂತೆ ನಿವೇಶನ, ಭೂಮಿ ಮತ್ತು ಹಕ್ಕುಪತ್ರ ಕೊಡಲೇ ಬೇಕು ಎಂದು ಸಂಚಾಲಕ ಹಂದ್ರಾಳ್ ನಾಗಭೂಷಣ್ ಆಗ್ರಹಿಸಿದರು.
ಇನ್ನು ಇವರ ಹೋರಾಟದ ಸ್ಥಳಕ್ಕೆ ಹಲವು ದಲಿತ ಮುಖಂಡರು ಕೂಡ ಭೇಟಿ ನೀಡಿದ್ರು. ನಿಮ್ಮ ಜೊತೆ ಬೆಂಬಲವಾಗಿ ನಾವು ನಿಲ್ತಿವಿ ಅಂತ ಭರವಸೆಯನ್ನು ಕೊಟ್ಟಿದ್ದಾರೆ. ಹಾಗೇಯೇ ಸ್ಥಳೀಯ ಆಡಳಿತ ಸರ್ಕಾರದ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕಿದೆ ಎಂದು ಒತ್ತಾಯ ಕೂಡ ಮಾಡಿದರು.
ಬಡವನ ಕೋಪ ದವಡೆಗೆ ಮೂಲ ಎಂಬ ಮಾತಿನಂತೆ ದೀನದಲಿತರು ತಮಗೆ ಸರ್ಕಾರ ನೀಡುವ ಆದೇಶವನ್ನು ಹೊರಡಿಸುವಂತೆ ಹೋರಾಟ ಮಾಡ್ತಿದಾರೆ. ಆದ್ರೆ, ಅಧಿಕಾರಿಗಳು ಮಾತ್ರ ಯಾವುದಕ್ಕು ಜಗ್ತಿಲ್ಲ. ಬದಲಿಗೆ ಸ್ಥಳಕ್ಕೆ ಬರುವ ಡಿಸಿ, ಎಸ್‌ಪಿ ,ಇಲಾಖವಾರು ಅಧಿಕಾರಿಗಳು ಭೇಟಿ ನೀಡ್ತಿದ್ದಾರೆ. ಆ ಕ್ಷಣಕ್ಕೆ ಅವರಿಗೆ ಸಮಾಧಾನಪಡಿಸುವ ಕೆಲ್ಸ ಮಾಡ್ತಿದ್ದಾರೆ. ಆದ್ರೆ ಅವ್ರ ನಿಜವಾದ ಸಮಸ್ಯೆಗೆ ಮಾತ್ರ ಸ್ಪಂದಿಸುತ್ತಿಲ್ಲ ಅನ್ನೋ ಆರೋಪ ಹೋರಾಟಗಾರರದ್ದು, ಈ ಕಾರಣಕ್ಕೆ ಹೋರಾಟಗಾರರು ತಮ್ಮ ಬೇಡಿಕೆಗಳನ್ನು ಸ್ಥಳದಲ್ಲಿಯೇ ಈಡೇರಿಸುವವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಕೂತಿದ್ದಾರೆ.