ತುಮಕೂರು : ರಾಷ್ಟ್ರಧ್ವಜ ಹಿಡಿದು ಆಪರೇಷನ್‌ ಸಿಂಧೂರ್‌ ಗೆ ಬೆಂಬಲ ಸೂಚಿಸಿದ AIMIM

ತುಮಕೂರು : 

ತುಮಕೂರು ನಗರದ ಬಾರ್‌ ಲೈನ್‌ ನಲ್ಲಿರುವ ಮಕ್ಕಾ ಮಸೀದಿಯಲ್ಲಿ  ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಬೆಂಬಲಿಸಿ AIMIM ತುಮಕೂರು ಜಿಲ್ಲಾಧ್ಯಕ್ಷ ಸೈಯದ್‌ ಬುರ್ಹಾನುದ್ದೀನ್‌ ಸಾಬ್‌ ನೇತೃತ್ವದಲ್ಲಿ ರಾಷ್ಟ್ರ ಧ್ವಜ ಹಿಡಿದು ಬೆಂಬಲ ಸೂಚಿಸಲಾಯಿತು. 

ವೀರ ಸೇನಾನಿಗಳ ಕೆಚ್ಚೆದೆಯ ಕಾರ್ಯಾಚರಣೆಗೆ ರಾಷ್ಟ್ರಧ್ವಜ ಹಿಡಿದು ಮುಸ್ಲಿಂ ಭಾಂದವರು ಬೆಂಬಲ ಸೂಚಿಸಿ ಭಾರತೀಯ ಸೇನೆಯನ್ನು ಶ್ಲಾಘಿಸಿದರು. ಈ ವೇಳೆ ದೇಶದ ಸಾರ್ವಭೌಮತ್ವ ಭದ್ರತೆಯ ವಿಚಾರದಲ್ಲಿ ನಾವೆಲ್ಲ ಒಂದೇ ಎನ್ನುವ ಐಕ್ಯತೆಯ ಸಂದೇಶವನ್ನು ಸಾರಲಾಯಿತು. ಇನ್ನು ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

 

 


 


 

Author:

...
Sushmitha N

Copy Editor

prajashakthi tv

share
No Reviews